Kannada Duniya

ಮಾರ್ಚ್ ನಲ್ಲಿ ಮೀನ ರಾಶಿಯಲ್ಲಿ ಬುಧಾದಿತ್ಯ ಯೋಗ ರಚನೆ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಗ್ರಹಗಳು ತನ್ನ ರಾಶಿಚಕ್ರವನ್ನು ಬದಲಾಯಿಸಿದಾಗ ಅಥವಾ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಸಂಯೋಗಗೊಂಡಾಗ ಹಲವು ಯೋಗಗಳು ರಚನೆಯಾಗುತ್ತವೆ. ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗಲಿದೆ. ಅದರಂತೆ ಮಾರ್ಚ್ 7ರಂದು ಬುಧನು ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ನಂತರ ಮಾರ್ಚ್ 14ರಂದು ಸೂರ್ಯನು ಮೀನ ರಾಶಿಗೆ ಪ್ರವೇಶಿಸುತ್ತಾನಂತೆ. ಇದರಿಂದ ಮೀನ ರಾಶಿಯಲ್ಲಿ ಬುಧಾದಿತ್ಯ ಯೋಗ ರಚನೆಯಾಗಲಿದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ವೃಷಭ ರಾಶಿ : ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ನಿಮ್ಮ ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗಲಿವೆ. ಸಮಾಜದಲ್ಲಿ ನಿಮಗೆ ಗೌರವ ಸಿಗಲಿದೆ. ವ್ಯವಹಾರದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.

ಮಿಥುನ ರಾಶಿ : ಸೂರ್ಯ ಮತ್ತು ಬುಧನ ಸಂಯೋಗದಿಂದ ನೀವು ಅದೃಷ್ಟದ ಬೆಂಬಲದಿಂದ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಕಾಣುತ್ತೀರಿ. ಉನ್ನತ ಅಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ. ನಿಮ್ಮ ಸಂಬಳ ಹೆಚ್ಚಾಗಲಿದೆ. ನಿಮಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.

ಕನ್ಯಾರಾಶಿ : ಉದ್ಯೋಗದಲ್ಲಿರುವವರು ಉನ್ನತ ಮಟ್ಟಕ್ಕೆ ಏರುತ್ತೀರಿ. ವ್ಯಾಪಾರ ಕ್ಷೇತ್ರದಲ್ಲಿ ಹೆಚ್ಚಿನ ಮಟ್ಟದ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ನೀವು ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...