Kannada Duniya

ಮನೆಯಲ್ಲಿ ಶಂಖವನ್ನು ಇಟ್ಟುಕೊಂಡವರು ಈ ನಿಯಮವನ್ನು ತಪ್ಪದೇ ಪಾಲಿಸಿ, ಇಲ್ಲವಾದರೆ ಅನರ್ಥವಾಗುತ್ತದೆ….!

ಹಿಂದೂ ಧರ್ಮದಲ್ಲಿ ಶಂಖಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾವುದೇ ಶುಭಕಾರ್ಯಗಳನ್ನು ಶಂಖನಾದದ ಮೂಲಕ ಪ್ರಾರಂಭಿಸುತ್ತಾರೆ. ಶಂಖವನ್ನು ಲಕ್ಷ್ಮಿ ದೇವಿಯ ಸ್ವರೂಪವೆಂದು ಪರಿಗಣಿಸುತ್ತಾರೆ. ಹಾಗಾಗಿ ಇದನ್ನು ಮನೆಯಲ್ಲಿಡುವಾಗ ಸರಿಯಾದ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ಸಮಸ್ಯೆಗಳು ಕಾಡುತ್ತವೆ.

ಮನೆಯಲ್ಲಿ ಪೂಜೆಗೆ ಯಾವಾಗಲೂ ದಕ್ಷಿಣ ವರ್ತಿ ಶಂಖವನ್ನು ಬಳಸಿ. ಹಾಗೇ ಎರಡು ಶಂಖವನ್ನಿಟ್ಟುಕೊಳ್ಳಬೇಕು. ಒಂದು ಪೂಜೆಗೆ ಇನ್ನೊಂದನ್ನು ಊದಲು ಬಳಸಬೇಕು. ಹಾಗೇ ಶಂಖದಲ್ಲಿ ನೀರನ್ನು ತುಂಬಿಸಿ ಅದನ್ನು ಮನೆಯಲ್ಲಿ ಸಿಂಪಡಿಸಿದರೆ ವಾಸ್ತುದೋಷ ನಿವಾರಣೆಯಾಗುತ್ತದೆ.

ಶಂಖವನ್ನು ಯಾವಾಗಲೂ ಬಿಳಿ ಬಟ್ಟೆಯಲ್ಲಿ ಮುಚ್ಚಿಡಬೇಕು, ಅದನ್ನು ಹೊರಗಿನವರು ಎಂದಿಗೂ ನೋಡಬಾರದು. ಬಳಸಿದ ಬಳಿಕ ಅದನ್ನು ನೀರಿನಿಂದ ತೊಳೆದು ಶುಭ್ರವಾದ ಬಿಳಿ ಬಟ್ಟೆಯಲ್ಲಿ ಮುಚ್ಚಿ ಇಡಿ.

ಶಂಖವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬೇಡಿ. ಇದು ಲಕ್ಷ್ಮಿಯ ಸ್ವರೂಪವಾದ್ದರಿಂದ ಇದನ್ನು ನೆಲದ ಮೇಲೆ ಇಟ್ಟರೆ ಲಕ್ಷ್ಮಿದೇವಿಗೆ ಅವಮಾನಮಾಡಿದಂತಾಗುತ್ತದೆ. ಹಾಗಾಗಿ ಅದನ್ನು ಸ್ಟ್ಯಾಂಡ್ ಅಥವಾ ಬಟ್ಟೆಯ ಮೇಲೆ ಇಡಿ.
ಶಿವನ ಪೂಜೆಯಲ್ಲಿ ಶಂಖವನ್ನು ಬಳಸಬೇಡಿ. ಶಂಖ ಶಿವ ಪೂಜೆಗೆ ನಿಷೇಧವಾಗಿದೆ.

ನಿಮ್ಮ ಮನೆಯ ಈ ದಿಕ್ಕಿನಲ್ಲಿ ಶ್ರೀ ಕೃಷ್ಣನ ಕೊಳಲನ್ನು ಇರಿಸಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಇರುತ್ತದೆ…!

ಇದು ಲಕ್ಷ್ಮಿ ಸ್ವರೂಪವಾದ್ದರಿಂದ ವಿಷ್ಣುವಿನ ಪೂಜೆಯಲ್ಲಿ ಮಾತ್ರ ಬಳಸಿ. ಹಾಗೇ ಶಂಖವನ್ನು ಪೂಜಿಸುವಾಗ ವಿಷ್ಣುವಿನ ಬಲಭಾಗದಲ್ಲಿಟ್ಟು ಪೂಜಿಸಿದರೆ ಒಳ್ಳೆಯದು.

 

Learn where to place Conch shell in Pooja Room


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...