Kannada Duniya

ಜನ್ಮಾಷ್ಟಮಿಯ ದಿನ ಶ್ರೀಕೃಷ್ಣನ ಈ ಮೂರ್ತಿಯನ್ನು ಮನೆಗೆ ತನ್ನಿ….!

ಶ್ರೀಕೃಷ್ಣ ಅನಂತ ರೂಪಗಳಿವೆ. ಹಾಗಾಗಿ ಕೃಷ್ಣನನ್ನು ಭಕ್ತರು ವಿವಿಧ ರೂಪದಲ್ಲಿ ಪೂಜಿಸುತ್ತಾರೆ. ಇದರಿಂದ ನಿಮ್ಮ ಜೀವನದಲ್ಲಿ ಅದ್ಭುತವಾದ ಬದಲಾವಣೆಗಳನ್ನು ಕಾಣುತ್ತೀರಿ. ಹಾಗಾಗಿ ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಈ ವಿಗ್ರಹಗಳನ್ನು ಪೂಜಿಸುವುದರಿಂದ ನಿಮ್ಮ ಕೋರಿಕೆಗಳು ಈಡೇರುತ್ತದೆಯಂತೆ.

ಲಡ್ಡೂ ಅಥವಾ ಬಾಲ ಗೋಪಾಲ್ : ಜನ್ಮಾಷ್ಟಮಿಯ ದಿನ ಕೃಷ್ಣನನ್ನು ಈ ರೂಪದಲ್ಲಿ ಪೂಜಿಸಲಾಗುತ್ತದೆ. ಇದು ಕೃಷ್ಣನ ಮಗುವಿನ ರೂಪ. ಸಂತಾನ ಬಯಸವವರು ಜನ್ಮಾಷ್ಟಮಿಯ ದಿನ ಕೃಷ್ಣನನ್ನು ಈ ರೂಪದಲ್ಲಿ ಪೂಜಿಸಿದರೆ ಸಂತಾನ ಫಲಪ್ರಾಪ್ತಿಯಾಗುತ್ತದೆಯಂತೆ.

ಶ್ರೀಕೃಷ್ಣನ ಬದಲು ಈ ವಸ್ತುಗಳನ್ನು ಪೂಜಿಸಿದರೂ ಜೀವನದಲ್ಲಿ ಯಶಸ್ಸು ಲಭಿಸುವುದು

ಬೆಣ್ಣೆ ಕಳ್ಳ ಕೃಷ್ಣ : ಈ ರೂಪ ಎಲ್ಲರನ್ನೂ ಆಕರ್ಷಿಸುತ್ತದೆ. ಜನ್ಮಾಷ್ಟಮಿಯಂದು ಈ ರೂಪದ ಕೃಷ್ಣನನ್ನು ಮನೆಗೆ ತರುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿ ಸಂತೋಷದ ವಾತಾವರಣ ನೆಲೆಸುತ್ತದೆ. ಪ್ರತಿಕಾರ್ಯದಲ್ಲೂ ಯಶಸ್ಸು ಸಿಗುತ್ತದೆ.

ಮುರಳೀಧರ : ಕೃಷ್ಣನ ಮುರಳೀಧರ ರೂಪವು ಮನೆಯಲ್ಲಿ ಸಂತೋಷ ಮತ್ತು ಅದೃಷ್ಟವನ್ನು ತರುತ್ತದೆ. ಹಾಗೇ ಜನ್ಮಾಷ್ಟಮಿಯ ದಿನ ಕೃಷ್ಣನಿಗೆ ಬೆಳ್ಳಿಯ ಕೊಳಲು ಅರ್ಪಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆ ದೂರವಾಗುತ್ತದೆ.

ರಾಧಾ ಕೃಷ್ಣ ರೂಪ : ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿರುವವರು ತಮ್ಮ ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರು ಜೊತೆಯಾಗಿರುವ ಮೂರ್ತಿಯನ್ನಿಟ್ಟುಕೊಳ್ಳಿ.

ಪಾರ್ಥ ಸಾರಧಿ ಕೃಷ್ಣ: ನಿಮ್ಮ ಜೀವನದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳು ತೊಲಗಲು ಈ ಮೂರ್ತಿಯನ್ನು ಸ್ಥಾಪಿಸಿ. ಇದರಿಂದ ಮನೆಯಲ್ಲಿ ತೊಂದರೆ ಮತ್ತು ಸಮಸ್ಯೆಗಳು ದೂರವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...