Kannada Duniya

ಈ ದಿಕ್ಕುಗಳಲ್ಲಿ ಅಡುಗೆ ಮನೆಯನ್ನು ಮರೆತು ಕೂಡ ನಿರ್ಮಿಸಬೇಡಿ…!

ಅಡುಗೆ ಮನೆ, ಮನೆಯ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ತಯಾರಿಸಿದ ಆಹಾರವು ವ್ಯಕ್ತಿಯ ಪೋಷಣೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದೆ. ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ಸ್ಥಾನ ಮತ್ತು ಆಂತರಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳಿವೆ. ಈ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಈ ಮೂರು ದಿಕ್ಕುಗಳಲ್ಲಿ ಅಡುಗೆ ಮನೆಯನ್ನು ನಿರ್ಮಿಸಬೇಡಿ.

ಈಶಾನ್ಯ ದಿಕ್ಕು ವ್ಯಕ್ತಿಯ ಮೆದುಳಿಗೆ ಮತ್ತು ಆಲೋಚನಾ ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಿದರೆ ಮನೆಯ ಸದಸ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದು ವ್ಯಕ್ತಿಯ ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿ ಯಾವಾಗಲೂ ಗೊಂದಲದ ಸ್ಥಿತಿಯಲ್ಲಿರುತ್ತಾನೆ. ಹಾಗಾಗಿ ಈ ದಿಕ್ಕಿನಲ್ಲಿ ಅಡುಗೆ ಮನೆ ನಿರ್ಮಿಸಬೇಡಿ.

ನೈರುತ್ಯ ದಿಕ್ಕು ವ್ಯಕ್ತಿಯ ಕೆಲಸದ ಕೌಶಲ್ಯವನ್ನು ಸುಧಾರಿಸಲು, ಉತ್ತಮ ಸಂಬಂಧಗಳನ್ನು ನಿರ್ವಹಿಸುವ ಕೆಲಸ ಮಾಡುತ್ತದೆ. ಆದರೆ ಈ ದಿಕ್ಕಿನಲ್ಲಿ ಅಡುಗೆ ಮನೆಯನ್ನು ನಿರ್ಮಿಸಿದರೆ ವ್ಯಕ್ತಿಯ ಕಾರ್ಯದಲ್ಲಿ ಅಸಮತೋಲನ ಉಂಟಾಗುತ್ತದೆ. ಇದರಿಂದ ಮನೆಯ ಸದಸ್ಯರು ತಮ್ಮ ಸಾಮಾರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸಂಧಿವಾತ ಸಮಸ್ಯೆ ನಿವಾರಣೆಯಾಗಬೇಕಾದರೆ ಈ ವಾಸ್ತು ಟ್ರೈ ಮಾಡಬಹುದಂತೆ?

ಉತ್ತರ ದಿಕ್ಕಿನಲ್ಲಿ ನೀರಿನ ಅಂಶವಿದೆ. ಹಾಗಾಗಿ ಅಡುಗೆ ಮನೆಯನ್ನು ಅಲ್ಲಿ ನಿರ್ಮಿಸಿದರೆ ಅಗ್ನಿ ಮತ್ತು ನೀರಿನ ನಡುವೆ ಸಂಘರ್ಷ ಉಂಟಾಗುತ್ತದೆ. ಇದರಿಂದ ಈ ದಿಕ್ಕು ಕುಬೇರನಿಗೆ ಸಂಬಂಧಿಸಿದ್ದಾದ್ದರಿಂದ ನಿಮಗೆ ಹಣಕಾಸಿನ ಸಮಸ್ಯೆ ಕಾಡುತ್ತದೆ.

 

Dont make Kitchens facing these directions


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...