Kannada Duniya

ಸಂಧಿವಾತ ಸಮಸ್ಯೆ ನಿವಾರಣೆಯಾಗಬೇಕಾದರೆ ಈ ವಾಸ್ತು ಟ್ರೈ ಮಾಡಬಹುದಂತೆ…!

ಮೂಳೆ ನೋವು ಅಥವಾ ಸಂಧಿವಾತದ ಸಮಸ್ಯೆ ಇಂದಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಸಂಧಿವಾತದ ಹಿಂದಿನ ಕಾರಣವೆಂದರೆ ನಿಮ್ಮ ಆಹಾರ ಎಂದು ನಂಬಲಾಗಿದೆ. ಹೌದು ನಿಮ್ಮ ಪೋಷಕಾಂಶದ ಕೊರತೆಯು ಮೂಳೆಯ ಸಮಸ್ಯೆಯಂತಹ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೇ ಈ ಸಮಸ್ಯೆಗಳಿಗೆ ವಾಸ್ತು ದೋಷವ ಕಾರಣವಾಗಿದೆಯಂತೆ. ಹಾಗಾಗಿ ಈ ಸಮಸ್ಯೆಯಿಂದ ಹೊರಗೆ ಬರಲು ಈ ವಾಸ್ತು ಸಲಹೆಯನ್ನು ಪಾಲಿಸಿ.

ನಿಮ್ಮ ಮನೆ ಉತ್ತರಾಭಿಮುಖವಾಗಿದ್ದರೆ ಸೂರ್ಯ ಕಿರಣಗಳು ಸರಿಯಾಗಿ ತಲುಪುವುದಿಲ್ಲ. ಇದರಿಂದ ಆ ಮನೆಯಲ್ಲಿ ತೇವಾಂಶ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಕಾಡುತ್ತದೆ.

ನಿಮ್ಮ ಮನೆ ಉತ್ತರ ದಿಕ್ಕಿನ ಕಡೆಗೆ ಇದ್ದರೆ ಪೂರ್ವ ದಿಕ್ಕಿನ ಕಡೆಗಿರುವ ಕಿಟಕಿಗಳನ್ನು ತೆರೆದಿಡಿ.

ನೈರುತ್ಯ ದಿಕ್ಕನ್ನು ಭೂಮಿಯ ಮೂಲೆ ಎಂದು ಕರೆಯುತ್ತಾರೆ. ಹಾಗಾಗಿ ನೀವು ಮಲಗುವಾಗ ಆ ದಿಕ್ಕಿನಲ್ಲಿ ನೀರಿನ ಬಾಟಲು ಅಥವಾ ನೀರಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಇಟ್ಟಿದ್ದರೆ ಸಂಧಿವಾತದ ಸಮಸ್ಯೆ ಕಾಡುತ್ತದೆಯಂತೆ.

ಕೆಲವರಿಗೆ ಕಬ್ಬಿಣದ ಹಾಸಿಗೆ ಮೇಲೆ ಮಲಗುವ ಪ್ರವೃತ್ತಿ ಇದೆ. ಆದರೆ ಈ ಕಬ್ಬಿಣದ ಹಾಸಿಗೆಯಲ್ಲಿ ಮಲಗಿದರೆ ನಿಮ್ಮ ದೇಹದ ಶಕ್ತಿ ಕುಂಠಿತವಾಗುತ್ತದೆ. ಇದರಿಂದ ಮೂಳೆಗಳ ಸಮಸ್ಯೆ ಕಾಡುತ್ತದೆ.

ವಾಸ್ತು ಪ್ರಕಾರ ಊಟದ ಕೋಣೆ ಹೀಗಿದ್ದರೆ ಆರೋಗ್ಯಕ್ಕೆ ಉತ್ತಮ

ನೀವು ಸಂಧಿವಾತದ ಸಮಸ್ಯೆಯನ್ನು ನಿವಾರಿಸಲು ಬೆಳಗಿನ ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಬೇಡಿ. ಇದರಿಂದ ವಿಟಮಿನ್ ಡಿ ಸಿಗುತ್ತದೆ. ಇದರಿಂದ ನಿಮ್ಮ ಮೂಳೆ ಬಲವಾಗುತ್ತದೆ. ನೀವು ಮಲಗುವ ಕೋಣೆಯಲ್ಲಿ ನೀರಿದ್ದರೆ ಅಲ್ಲಿಂದ ತೆಗೆಯಿರಿ. ಮಲಗುವಾಗ ನಿಮ್ಮ ಬಳಿ ನೀರನ್ನು ಇಟ್ಟುಕೊಳ್ಳಡಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...