Kannada Duniya

ಹೋಲಿಕಾ ದಹನದ ದಿನ ಈ ರಾಶಿಯವರು ಎಚ್ಚರದಿಂದಿರಿ

ಹೋಲಿಕಾ ದಹನವನ್ನು ಮಾರ್ಚ್ 24ರಂದು ಆಚರಿಸಲಾಗುತ್ತದೆ. ಈ ದಿನವನ್ನು ಅಧರ್ಮವನ್ನು ದಹನ ಮಾಡಿ ಧರ್ಮಕ್ಕೆ ವಿಜಯ ದೊರೆತ ದಿನವೆಂದು ಆಚರಿಸಲಾಗುತ್ತದೆ. ಆದರೆ ಈ ದಿನ ಕೆಲವು ರಾಶಿಯವರು ಎಚ್ಚರಿಕೆಯಿಂದಿರಬೇಕು. ಇಲ್ಲವಾದರೆ ನಿಮಗೆ ವಿಪತ್ತು ಕಾಡಬಹುದು.

ಕನ್ಯಾ: ನಿಮ್ಮ ಮನಸ್ಸಿನಲ್ಲಿ ಗೊಂದಲ ಉಂಟಾಗಿ ನೀವು ಅಸಮಾಧಾನಗೊಳ್ಳಬಹುದು. ಹಾಗಾಗಿ ಬೇರೆಯವರೊಂದಿಗೆ ಜಗಳವಾಡುವುದನ್ನು ತಪ್ಪಿಸಿ. ಖರ್ಚುಗಳನ್ನು ಕಡಿಮೆ ಮಾಡಿ.

ತುಲಾ : ನಿಮ್ಮ ಆತ್ಮವಿಶ್ವಾಸ ದುರ್ಬಲವಾಗುತ್ತದೆ. ನೀವು ತೆಗೆದುಕೊಳ್ಳುವ ನಿರ್ಧಾರದಿಂದ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನೀವು ಖಿನ್ನತೆಗೆ ಒಳಗಾಗಬಹುದು.

ಧನು : ಈ ಸಮಯದಲ್ಲಿ ನೀವು ಹಿಂಸಾತ್ಮಕವಾಗಿ ವರ್ತಿಸಬಹುದು. ವ್ಯಾಪಾರದಲ್ಲಿ ವಿವಾದ ಉಂಟಾಗಬಹುದು. ನಿಮ್ಮ ಆರೋಗ್ಯ ಹದಗೆಡುತ್ತದೆ.

ಮಕರ : ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಕುಟುಂಬ ಸದಸ್ಯರೊಂದಿಗೆ ಅನವಶ್ಯಕ ವಾದವನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.

ಕುಂಭ : ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾಗಬಹುದು. ಸಂಗಾತಿಯೊಂದಿಗೆ ವಿವಾದವಾಗಬಹುದು.ನಿಮ್ಮ ಉದ್ಯೋಗದಲ್ಲಿ ಸಮಸ್ಯೆ ಎದುರಾಗಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...