Kannada Duniya

ಹೋಳಿ ಹಬ್ಬದಂದು ತ್ರಿಗ್ರಾಹಿ ಯೋಗ ರಚನೆ; ಈ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆಯಂತೆ

ಫಾಲ್ಗುಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 25ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮೀನ ರಾಶಿಯಲ್ಲಿ ಸೂರ್ಯ, ಬುಧ ಮತ್ತು ರಾಹುವಿನ ಸಂಯೋಗವಾಗಲಿದ್ದು, ಇದರಿಂದ ತ್ರಿಗ್ರಾಹಿ ಯೋಗ ರಚನೆಯಾಗಲಿದೆ. ಇದರಿಂದ ಈ ರಾಶಿಯವರಿಗೆ ಸಂಕಷ್ಟ ಎದುರಾಗಲಿದೆಯಂತೆ.

ಮಿಥುನ : ಈ ಸಮಯದಲ್ಲಿ ನೀವು ಸವಾಲುಗಳನ್ನು ಎದುರಿಸುತ್ತೀರಿ. ಹಾಗಾಗಿ ನೀವು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಕರವಾಗಬಹುದು. ಜನರು ನಿಮ್ಮನ್ನು ಇಷ್ಟಪಡುವುದಿಲ್ಲ.

ಸಿಂಹ : ಈ ಸಮಯದಲ್ಲಿ ನೀವು ತೊಂದರೆಗಳನ್ನು ಎದುರಿಸುತ್ತೀರಿ. ಯಾವುದೇ ಹೊಸ ಕೆಲಸ ಪ್ರಾರಂಭಿಸಿದರೆ ಅದರಿಂದ ಅಡೆತಡೆಗಳು ಎದುರಾಗುತ್ತವೆ. ನಿಮ್ಮ ಗುರಿಯನ್ನು ತಲುಪಲು ಕಷ್ಟವಾಗುತ್ತದೆ.

ಕನ್ಯಾ : ಈ ಸಮಯದಲ್ಲಿ ನೀವು ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನೀವು ನಾಚಿಕೆ ಸ್ವಭಾವದವರಾದ ಕಾರಣ ನೀವು ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತೀರಿ.

ಮೀನ : ಈ ಸಮಯದಲ್ಲಿ ನೀವು ನಿಮ್ಮ ಜೀವನವನ್ನು ಸಮತೋಲನಗೊಳಿಸಲು ಕಷ್ಟಪಡಬೇಕಾಗುತ್ತದೆ. ಪ್ರೇಮ ಸಂಬಂಧದಲ್ಲಿ ಸಮಸ್ಯೆ ಉದ್ಭವಿಸುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...