Kannada Duniya

ಹರಿಯಲಿ ತೀಜ್ (ಆಗಸ್ಟ್ 11) ದಿನದಂದು ವಿವಾಹಿತ ಸ್ತ್ರೀಯರು ಈ ಕೆಲಸ ಮಾಡಬಾರದು

ಶ್ರಾವಣ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು ಹರಿಯಲಿ ತೀಜ್ (Hariyali Teej) ಉಪವಾಸವನ್ನು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆ ಪ್ರಕಾರ, ಈ ದಿನ ಶಿವ ಮತ್ತು ಪಾರ್ವತಿ ತಾಯಿ ಮತ್ತೆ ಒಂದಾದ ದಿನ ಎನ್ನಲಾಗುತ್ತದೆ. ಹಾಗಾಗಿ ಈ ದಿನ ಶಿವ ಪಾರ್ವತಿಯರ ಪೂಜೆಯನ್ನು ಮಾಡಲಾಗುತ್ತದೆ. ಈ ವರ್ಷ ಹರಿಯಲಿ ತೀಜ್ ಆಗಸ್ಟ್ 11ರಂದು ಬಂದಿದೆ. ಹಾಗಾಗಿ ಈ ದಿನ ವಿವಾಹಿತ ಸ್ತ್ರೀಯರು ಯಾವ ಕೆಲಸವನ್ನು ಮಾಡಬೇಕು? ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

 

ಈ ದಿನ ವಿವಾಹಿತ ಮಹಿಳೆಯರು ಹಸಿರು ಬಳೆಗಳನ್ನು ಧರಿಸಬೇಕು. ಏಕೆಂದರೆ ಇದರಿಂದ ಪತಿಯ ಆಯಸ್ಸು ಹೆಚ್ಚಾಗುತ್ತದೆ. ಈ ದಿನ ಹಿರಿಯರನ್ನು ಗೌರವಿಸಿ. ಎಲ್ಲರನ್ನೂ ಸಂತೋಷದಿಂದ ನೋಡಿಕೊಳ್ಳಿ. ಒಳ್ಳೆಯ ಕೆಲಸ ಮಾಡಿ. ಈ ದಿನ ಉಪವಾಸ ಮಾಡಿ. ಶಿವ ಪಾರ್ವತಿಗೆ ಸಂಬಂಧಿಸಿದ ಹಾಡನ್ನು, ಕಥೆಗಳನ್ನು ಕೇಳಿ.

 

ಈ ದಿನದಂದು ಕೋಪಗೊಳ್ಳಬೇಡಿ. ಯಾರನ್ನೂ ನಿಂದಿಸಬೇಡಿ. ಜಗಳವಾಡುವುದನ್ನು ತಪ್ಪಿಸಿ. ಮನಸ್ಸಿನಲ್ಲಿ ನಕರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳಲು ಬಿಡಬೇಡಿ. ಈ ದಿನ ಸಂಗಾತಿಗೆ ಸುಳ್ಳು ಹೇಳಬೇಡಿ. ಯಾವುದೆ ವಿಚಾರವನ್ನು ಮುಚ್ಚಿ ಇಡಬೇಡಿ. ಈ ದಿನ ಕಪ್ಪು ಮತ್ತು ಬಿಳಿ ಬಟ್ಟೆಗಳನ್ನು ಧರಿಸಬೇಡಿ. ಈ ದಿನ ನೀರು ಕುಡಿಯುವುದನ್ನು ತಪ್ಪಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...