Kannada Duniya

ಮದುವೆ ವಿಳಂಬವಾಗುತ್ತಿದ್ದರೆ ಮಹಾಶಿವರಾತ್ರಿಯಂದು ಈ ಕ್ರಮ ಪಾಲಿಸಿ

ಮಹಾಶಿವರಾತ್ರಿಯ ಒಂದು ವಿಶೇಷವಾದ ದಿನವಾಗಿದೆ. ಯಾಕೆಂದರೆ ಈ ದಿನ ಶಿವ ಪಾರ್ವತಿ ವಿವಾಹವಾದರೂ ಎನ್ನಲಾಗುತ್ತದೆ. ಹಾಗಾಗಿ ಮದುವೆ, ಮತ್ತು ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಇದ್ದರೆ ಅಂತವರು ಮಹಾಶಿವರಾತ್ರಿಯ ದಿನ ಕೆಲವು ಕ್ರಮಗಳನ್ನು ಪಾಲಿಸಿದರೆ ಪರಿಹಾರ ಕಂಡುಕೊಳ್ಳಬಹುದಂತೆ.

ಈ ವರ್ಷ ಮಹಾಶಿವರಾತ್ರಿ ಮಾರ್ಚ್ 8 ರಂದು ಬಂದಿದೆ. ಹಾಗಾಗಿ ಮದುವೆ ವಿಳಂಬವಾಗುತ್ತಿದ್ದರೆ ಅಂತವರು ಮಹಾಶಿವರಾತ್ರಿಯಂದು ಈ ಕ್ರಮ ಪಾಲಿಸಿ.

ಮಹಾಶಿವರಾತ್ರಿಯಂದು ಹಳದಿ ಬಣ್ಣದ ಬಟ್ಟೆ ಧರಿಸಿ ಶಿವ ಪಾರ್ವತಿಯರಿಗೆ ಮಾರಿಗೋಲ್ಡ್ ಹೂವಿನ ಹಾರವನ್ನು ಅರ್ಪಿಸಿ. ಹಾಗೇ ಈ ದಿನ “ಓಂ ಗೌರಿ ಶಂಕರಾಯ ನಮಃ” ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಇದರಿಂದ ಮದುವೆಗೆ ಎದುರಾದ ಅಡೆತಡೆಗಳು ನಿವಾರಣೆಯಾಗುತ್ತದೆ.

ಹಾಗೇ ಈ ದಿನ ಶಿವ ದೇವಾಲಯಕ್ಕೆ ತೆರಳಿ ಹಸುವಿನ ಹಾಲಿನಿಂದ ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿಸಿ. ಹಾಗೇ ಈ ದಿನ ಹಸು ಅಥವಾ ಎತ್ತಿಗೆ ಹುಲ್ಲು, ಬಾಳೆಹಣ್ಣುಗಳನ್ನು ತಿನ್ನಿಸಿ. ಎತ್ತಿನ ಪೂಜೆ ಮಾಡಿ ನಿಮ್ಮ ಸಮಸ್ಯೆಯನ್ನು ಅದರ ಬಳಿ ಹೇಳಿಕೊಳ್ಳಿ. ಇದರಿಂದ ನಿಮ್ಮ ಸಮಸ್ಯೆ ಬಹಳ ಬೇಗನೆ ನಿವಾರಣೆಯಾಗುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...