Kannada Duniya

ಶಿವಲಿಂಗಕ್ಕೆ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಅರ್ಪಿಸಬೇಡಿ…..!

 ಶಿವನನ್ನು ಮೆಚ್ಚಿಸಲು ಉಪವಾಸ, ಪೂಜೆ, ವ್ರತಗಳನ್ನು ಮಾಡುತ್ತಾರೆ. ಆದರೆ ಶಿವಲಿಂಗವನ್ನು ಪೂಜಿಸುವಾಗ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಶಿವಲಿಂಗಕ್ಕೆ ಅರ್ಪಿಸಬೇಡಿ.

ಅರಿಶಿನ : ಅರಿಶಿನವನ್ನು ಶುಭ ಸಮಾರಂಭಗಳಿಗೆ ಮತ್ತು ಪೂಜೆಗೆ ಬಳಸುತ್ತಾರೆ. ಆದರೆ ಶಿವಲಿಂಗಕ್ಕೆ ಅರಿಶಿನವನ್ನು ಅರ್ಪಿಸುವುದಿಲ್ಲ. ಶಿವಲಿಂಗವು ಪುರುಷತ್ವದ ಸೂಚಕ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅರಿಶಿನ ಸೌಂದರ್ಯದ ಸಂಕೇತವಾಗಿದೆ. ಹಾಗಾಗಿ ಅರಿಶಿನವನ್ನು ಶಿವಲಿಂಗಕ್ಕೆ ಅರ್ಪಿಸಬಾರದು. ಇದರಿಂದ ಚಂದ್ರ ದುರ್ಬಲನಾಗುತ್ತಾನೆ.

ಸಿಂಧೂರ : ಗಂಡನ ದೀರ್ಘಾಯುಷ್ಯಕ್ಕಾಗಿ ವಿವಾಹಿತ ಮಹಿಳೆಯರು ಸಿಂಧೂರವನ್ನು ದೇವರಿಗೆ ಅರ್ಪಿಸುತ್ತಾರೆ. ಆದರೆ ಶಿವಪುರಾಣದಲ್ಲಿ ಶಿವಲಿಂಗಕ್ಕೆ ಸಂಧೂರವನ್ನು ಅರ್ಪಿಸಬಾರದು. ಯಾಕೆಂದರೆ ಶಿವ ವಿನಾಶಕ ಎಂದು ಕರೆಯುತ್ತಾರೆ. ಈ ಕಾರಣಕ್ಕಾಗಿ ಶಿವನಿಗೆ ಸಿಂಧೂರ ಅರ್ಪಿಸಬಾರದು.

ಕೆಂಪು ಹೂಗಳು : ಕೆಂಪು ಮತ್ತು ಕೇದಿಗೆ ಹೂಗಳನ್ನು ಶಿವನಿಗೆ ಅರ್ಪಿಸಬಾರದು. ಇದರಿಂದ ಶಿವನು ಕೋಪಗೊಳ್ಳುತ್ತಾನೆ ಎಂದು ಹೇಳುತ್ತಾರೆ.

ಅಕ್ಷತೆಯನ್ನು ಪೂಜೆಯಲ್ಲಿ ಸೇರಿಸಿಕೊಳ್ಳುವುದ್ದೇಕೆ ಗೊತ್ತಾ?

ತೆಂಗಿನಕಾಯಿ : ತೆಂಗಿನಕಾಯಿ ಲಕ್ಷ್ಮಿದೇವಿಯ ಸಂಕೇತವಾಗಿದೆ. ಆದ್ದರಿಂದ ಇದು ವಿಷ್ಣುವಿಗೆ ಸಂಬಂಧಿಸಿದೆ. ಹಾಗಾಗಿ ಶಿವಲಿಂಗಕ್ಕೆ ತೆಂಗಿನಕಾಯಿ ಅರ್ಪಿಸಬಾರದು.

 

List of things that should never be offered to Shivling


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...