Kannada Duniya

Chandra dosha remedy: ಚಂದ್ರ ದೋಷವನ್ನು ನಿವಾರಿಸಲು ಫಾಲ್ಗುಣ ಮಾಸದಲ್ಲಿ ಈ ಕ್ರಮಗಳನ್ನು ತೆಗೆದುಕೊಳ್ಳಿ…!

ಫಾಲ್ಗುಣ ಮಾಸವನ್ನು ಕೊನೆಯ ಮಾಸವೆಂದು ಕರೆಯಲಾಗುತ್ತದೆ. ಇದು ಅತ್ಯಂತ ಪವಿತ್ರವಾದ ತಿಂಗಳು. ಇದರ ಅಂತ್ಯದ ನಂತರ ಹೊಸ ಮಾಸ ಚೈತ್ರ ಪ್ರಾರಂಭವಾಗುತ್ತದೆ.ಈ ಮಾಸವು 17 ಫೆಬ್ರವರಿಯಿಂದ ಆರಂಭವಾಗಿದ್ದು, 18 ಮಾರ್ಚ್‌ ವರೆಗೆ ಇರಲಿದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ಚಂದ್ರನು ಫಾಲ್ಗುಣ ಮಾಸದಲ್ಲಿ ಜನಿಸಿದನು ಎನ್ನಲಾಗುತ್ತದೆ. ಆದ್ದರಿಂದ ಚಂದ್ರ ದೋಷವನ್ನು ನಿವಾರಿಸಲು ಈ ಮಾಸದಲ್ಲಿ ಈ ಪರಿಹಾರವನ್ನು ಮಾಡಿ.

ಫಾಲ್ಗುಣ ಮಾಸದಲ್ಲಿ ಬಿಳಿಯ ವಸ್ತುಗಳನ್ನು ದಾನ ಮಾಡಿದರೆ ತುಂಬಾ ಒಳ್ಳೆಯದು. ಹಾಗಾಗಿ ಬಿಳಿ ಹೂಗಳು, ಮೊಸರು, ಬಿಳಿ ಶಂಖ, ಸಕ್ಕರೆ, ಅಕ್ಕಿ, ಬಿಳಿ ಚಂದನ, ಬಿಳಿ ಬಟ್ಟೆ ಇತ್ಯಾದಿಗಳನ್ನು ಈ ಮಾಸದಲ್ಲಿ ದಾನ ಮಾಡಿದರೆ ಚಂದ್ರ ದೋಷ ನಿವಾರಣೆಯಾಗುತ್ತದೆ.
ಫಾಲ್ಗುಣ ಮಾಸದ ಸೋಮವಾರದಂದು ಉಪವಾಸವನ್ನು ಮಾಡಿ. ಇದರಿಂದ ಶಿವನ ಅನುಗ್ರಹ ಪ್ರಾಪ್ತಿಯಾಗಿ ಚಂದ್ರ ದೋಷ ನಿವಾರಣೆಯಾಗುತ್ತದೆ.

Read partner mind: ಸಂಗಾತಿಯ ಮನಸ್ಸನ್ನು ಓದುವುದು ಹೇಗೆ ಗೊತ್ತಾ…?

ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ಚಂದ್ರನ ಬೆಳಕಿನಲ್ಲಿ ಕುಳಿತು ಚಂದ್ರ ದೇವರ ಮಂತ್ರವನ್ನು ಪಠಿಸಿ. ಇದರಿಂದ ಚಂದ್ರ ನ ಅನುಗ್ತಹ ದೊರೆಯುತ್ತದೆ. ಈ ಎಲ್ಲಾ ಕಾರ್ಯಗಳನ್ನು ಫಾಲ್ಗುಣ ಮಾಸದಲ್ಲಿ ಮಾಡುವುದರಿಂದ ನಿಮ್ಮ ಕೋಪವನ್ನು ನಿಯಂತ್ರಿಸಬಹುದು ಮತ್ತು ನಿಮ್ಮ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...