Kannada Duniya

ಸಮಸ್ಯೆಗಳು ನಿವಾರಣೆಯಾಗಲು ಯಾವ ದೇವರಿಗೆ ಯಾವ ದೀಪ ಬೆಳಗಬೇಕು ಗೊತ್ತಾ…?

ಎಲ್ಲರ ಮನೆಯಲ್ಲೂ ಪ್ರತಿದಿನ ದೇವರನ್ನು ಆರಾಧಿಸುವಾಗ ದೀಪವನ್ನು ಬೆಳಗಿಸುತ್ತಾರೆ. ದೀಪ ಬೆಳಗುವುದರಿಂದ ಕಷ್ಟದ ಕಾಲ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಯಾವ ರೀತಿಯ ಎಣ್ಣೆಯನ್ನು ಅದರಲ್ಲಿ ಹಾಕುತ್ತೀರಿ ಎಂಬುದಕ್ಕೂ ಕೂಡ ಹೆಚ್ಚಿನ ಮಹತ್ವವಿದೆ. ಹಾಗೇ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲು ಯಾವ ದೇವರಿಗೆ ಯಾವ ದೀಪ ಬೆಳಗಬೇಕು ಎಂಬುದನ್ನು ತಿಳಿದುಕೊಳ್ಳಿ.

-ಶಿವನನ್ನು ಮೆಚ್ಚಿಸಲು ಎಂಟು ಅಥವಾ ಹನ್ನೆರಡು ದೀಪಗಳಿಗೆ ಹಳದಿ ಸಾಸಿವೆ ಎಣ್ಣೆ ಹಾಕಿ ದೀಪವನ್ನು ಬೆಳಗಿಸಬೇಕು. ಇದರಿಂದ ಶಿವನ ಕೃಪೆ ನಿಮ್ಮ ಮೇಲಾಗುತ್ತದೆ ಮತ್ತು ಅಕಾಲಿಕ ಮರಣದ ಭಯವೂ ಮುಗಿಯುತ್ತದೆ.

-ದುರ್ಗೆ ಹಾಗೂ ಸರಸ್ವತಿಗೆ ಎರಡು ಬತ್ತಿಯನ್ನು ಇಟ್ಟು ದೀಪ ಬೆಳಗಿಸಿ. ಹಾಗೇ ಗಣೇಶನ ಅನುಗ್ರಹ ಪಡೆಯಲು ಮೂರು ಬತ್ತಿಗಳನ್ನು ಇಟ್ಟು ದೀಪ ಬೆಳಗಿಸಿ.

-ಹನುಮಂತನ ಅನುಗ್ರಹ ಪಡೆಯಲು ಧಾನ್ಯಗಳ ಹಿಟ್ಟಿನಿಂದ ದೀಪ ಬೆಳಗಿಸಿ. ಅಕ್ಕಿ, ಗೋಧಿ, ಉದ್ದು. ಜೋಳ ಮುಂತಾದವುಗಳಿಂದ ದೀಪ ಬೆಳಗಿಸಿ.

-ಲಕ್ಷ್ಮಿಯ ಅನುಗ್ರಹ ಪಡೆದರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಅದಕ್ಕಾಗಿ ಲಕ್ಷ್ಮಿದೇವಿಗೆ ಏಳು ಬತ್ತಿಯನ್ನಿಟ್ಟು ತುಪ್ಪದ ದೀಪ ಬೆಳಗಬೇಕು.

Peepal tree: ಮನೆಯ ಬಳಿ ಅರಳಿಮರ ಬೆಳೆಸಬಾರದು ಎಂಬುದಕ್ಕೆ ಕಾರಣವೇನು ಗೊತ್ತಾ…?

-ಶನಿದೇವನ ಅನುಗ್ರಹ ಪಡೆದರೆ ಕಷ್ಟಗಳು ನಿವಾರಣೆಯಾಗುತ್ತದೆ. ಹಾಗಾಗಿ ಶನಿದೇವನಿಗೆ ಸಾಸಿವೆ ಎಣ್ಣೆಯಿಂದ ದೀಪ ಬೆಳಗಿಸಬೇಕು.

-ರಾಹುಕೇತು ಗ್ರಹಗಳ ತೊಂದರೆಯಾಗಿದ್ದರೆ ಅಗಸೆಬೀಜದ ಎಣ್ಣೆಯಿಂದ ದೀಪ ಬೆಳಗಿ. ಇದರಿಂದ ಸ್ಥಗಿತಗೊಂಡ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...