Kannada Duniya

ಸೆಪ್ಟೆಂಬರ್ ಮೊದಲ ವಾರದಲ್ಲಿ ಶುಕ್ರ ಮತ್ತು ಮಂಗಳ ಒಟ್ಟಿಗೆ ಸಾಗುತ್ತಾರೆ. ಇದರಿಂದ ಈ ನಾಲ್ಕು ರಾಶಿಯವರಿಗೆ ಒಳ್ಳೆಯದಾಗಲಿದೆ

ಸೆಪ್ಟೆಂಬರ್ ತಿಂಗಳಿನಲ್ಲಿ ಅನೇಕ ದೊಡ್ಡ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿವೆ. ಈ ತಿಂಗಳಿನಲ್ಲಿ ಮೊದಲಿಗೆ ಮಂಗಳ ಮತ್ತು ಶುಕ್ರ ರಾಶಿಗಳು ಬದಲಾಗುತ್ತವೆ. ಮಂಗಳವು ಸೆಪ್ಟೆಂಬರ್ 6 ರಂದು ಕನ್ಯಾರಾಶಿಗೆ ಪ್ರವೇಶಿಸಲಿದ್ದು, ಸೆಪ್ಟೆಂಬರ್ 22ರ ವರೆಗೆ ಈ ರಾಶಿಯಲ್ಲೇ ಇರುತ್ತಾನೆ. ಹಾಗೇ ಶುಕ್ರನು ತುಲಾ ರಾಸಿಗೆ ಪ್ರವೇಶಿಸುತ್ತಾನೆ. ಹಾಗಾಗಿ ಈ ಗ್ರಹಗಳ ಬದಲಾವಣೆಯಿಂದ ಕೆಲವು ರಾಶಿಯವರಿಗೆ ಒಳ್ಳೆಯದಾಗಲಿದೆ.

 

ಮೇಷ : ನಿಮ್ಮ ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ. ಈ ಸಮಯ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ನೀವು ಗೌರವ ಪಡೆಯುತ್ತೀರಿ.

 

ವೃಷಭ : ಇವರಿಗೆ ಲಾಭಗಳಿಸಲು ಅವಕಾಶ ಸಿಗುತ್ತದೆ. ಕಠಿಣ ಪರಿಶ್ರಮ ಪೂರ್ಣ ಫಲವನ್ನು ನೀಡುತ್ತದೆ. ಬಾಸ್ ನಿಮ್ಮ ಕೆಲಸದಿಂದ ಸಂತೋಷಗೊಳ್ಳುತ್ತಾರೆ. ಇದರಿಂದ ನಿಮಗೆ ಬಡ್ತಿ ಸಿಗುತ್ತದೆ.

 

ವೃಶ್ಚಿಕ : ಇವರ ಆರ್ಥಿಕ ಪರಿಸ್ಥಿತಿ ಮೊದಲಿಗಿಂತಲೂ ಉತ್ತಮವಾಗಲಿದೆ. ಅದೃಷ್ಟವು ಒಲಿದು ಬರುತ್ತದೆ. ಕೌಟುಂಬಿಕ ಜೀವನವು ಆಹ್ಲಾದಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಸಿಗುತ್ತದೆ.

 

ಆಗಸ್ಟ್ 26 ರಂದು ಬುಧ ಕನ್ಯಾರಾಶಿಗೆ ಪ್ರವೇಶ; ಈ ರಾಶಿಯವರಿಗೆ ಶುಭವಾಗಲಿದೆ

ಧನು : ನೀವು ಆರ್ಥಿಕವಾಗಿ ಉತ್ತಮವಾಗುತ್ತೀರಿ. ನೀವು ಯಶಸ್ಸನ್ನು ಪಡೆಯುವ ಅವಕಾಶಗಳು ಹೆಚ್ಚಾಗುತ್ತದೆ. ವ್ಯಾಪಾರ ಮಾಡುವಂತಹ ಜನರು ಸ್ವಲ್ಪ ದೊಡ್ಡ ಮಟ್ಟದ ಲಾಭವನ್ನು ಪಡೆಯುವ ಸಾಧ್ಯತೆ ಇದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...