Kannada Duniya

ಸಂತೋಷ, ಸಮೃದ್ಧಿಗಾಗಿ ಈ ಗಿಡ ನೆಡಿ…!

ತಮ್ಮ ಮನೆಯಲ್ಲಿ ಮರಗಳು ಮತ್ತು ಗಿಡಗಳನ್ನು ನೆಡಲು ಇಷ್ಟಪಡುತ್ತಾರೆ. ಮರಗಿಡಗಳು ನಮ್ಮ ಪರಿಸರವನ್ನು ಸ್ವಚ್ಛಗೊಳಿಸುವುದಲ್ಲದೇ ನಮ್ಮ ಸುತ್ತಮುತ್ತ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ಗಿಡಗಳು ಮಂಗಳಕರವಲ್ಲ. ಹಾಗಾಗಿ ಮನೆಯ ಸಮೃದ್ಧಿ, ಸಂತೋಷಕ್ಕೆ ಕಾರಣವಾಗುವಂತಹ ಗಿಡಗಳನ್ನು ನೆಡಿ.

-ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ವಾಸ್ತುದೋಷವನ್ನು ನಿವಾರಿಸುವುದರ ಜೊತೆಗೆ ಸಂತೋಷ ಸಮೃದ್ಧಿಯನ್ನು ತರುತ್ತದೆ. ಹಾಗಾಗಿ ಇದನ್ನು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಿ.

-ಮನೆಯಲ್ಲಿ ಮನಿ ಪ್ಲ್ಯಾಂಟ್ ಗಿಡವನ್ನು ನೆಡುವುದು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ನೆಡಲು ಸರಿಯಾದ ದಿಕ್ಕು ಆಗ್ನೇಯ ಅಥವಾ ಉತ್ತರ ದಿಕ್ಕು. ಇದನ್ನು ನೆಡುವುದರಿಂದ ಲಕ್ಷ್ಮಿ ಕೃಪೆ ನಿಮಗೆ ದೊರೆಯುತ್ತದೆಯಂತೆ.

-ಅರಿಶಿನ ಗಿಡವನ್ನು ಮನೆಯಲ್ಲಿ ನೆಡುವುದರಿಂದ ನಕರಾತ್ಮಕ ಶಕ್ತಿ ದೂರವಾಗುತ್ತದೆಯಂತೆ. ಇದರೊಂದಿಗೆ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆಯಂತೆ.

-ಕೃಷ್ಣಕಾಂತ ಬಳ್ಳಿಯನ್ನು ಮನೆಯಲ್ಲಿ ನೆಡುವುದರಿಂದ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ. ಈ ಬಳ್ಳಿಯಲ್ಲಿ ನೀಲಿ ಹೂಗಳಾಗುತ್ತದೆ. ಇದನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಕರೆಯುತ್ತಾರೆ.

ತುಳಸಿ ಗಿಡವನ್ನು ಮುಟ್ಟುವ ವೇಳೆ ಈ ಬಗ್ಗೆ ಎಚ್ಚರವಿರಲಿ, ಇಲ್ಲವಾದರೆ ಮಹಾಪಾಪ ಕಾಡುತ್ತೆ

-ಮನೆಯಲ್ಲಿ ಕ್ರಾಸ್ಸುಲಾ ಓವಟ ಗಿಡವನ್ನು ನೆಡುವುದು ಕೂಡ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಫ್ರೆಂಡ್ ಶಿಪ್ ಟ್ರೀ, ಲಕ್ಕಿ ಪ್ಲ್ಯಾಂಟ್ ಎಂದು ಕರೆಯುತ್ತಾರೆ. ಇದು ಹಣವನ್ನು ಆಕರ್ಷಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...