Kannada Duniya

ಶನಿವಾರದಂದು ಶನಿದೇವನ ಅನುಗ್ರಹ ಪಡೆಯಲು ಈ ವಿಧಾನ ಅನುಸರಿಸಿ…!

ಶನಿ ಪೂಜೆಗೆ ಶನಿವಾರ ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶನಿ ಗ್ರಹವು ದುರ್ಬಲವಾಗಿದ್ದರೆ ವ್ಯಕ್ತಿಯು ಜೀವನದಲ್ಲಿ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಾನೆ. ಆದರೆ ಈ ಗ್ರಹ ಉತ್ತಮ ಸ್ಥಾನದಲ್ಲಿದ್ದರೆ ನಿಮ್ಮ ಪ್ರಗತಿಯ ಹಾದಿ ತೆರೆಯುತ್ತದೆ. ಹಾಗಾಗಿ ಶನಿದೇವನ ಅನುಗ್ರಹ ಪಡೆಯಲು ಶನಿವಾರದಂದು ಈ ವಿಧಾನ ಅನುಸರಿಸಿ.

-ಶನಿದೇವನ ಆಶೀರ್ವಾದ ಪಡೆಯಲು ಶನಿವಾರದಂದು ಮಣ್ಣಿನ ಮಡಿಕೆಯಲ್ಲಿ ಎಳ್ಳಿನ ಎಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಸೇರಿಸಿ ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಂಡು ಅದನ್ನು ಬೇರೆಯವರಿಗೆ ದಾನ ಮಾಡಿ.

-ಶನಿ ಗ್ರಹವನ್ನು ಬಲಪಡಿಸಲು ಧಾತುರಾವನ್ನು ಧರಿಸಿ. ಧಾತುರಾದ ಬೇರನ್ನು ಕುತ್ತಿಗೆ ಅಥವಾ ಕೈಗೆ ಶನಿವಾರದಂದು ಕಟ್ಟಿಕೊಳ್ಳಿ . ಇದರಿಂದ ವೃತ್ತಿ ಜೀವನದಲ್ಲಿ ಎದುರಾಗುವ ಅಡೆತಡೆಗಳು ದೂರವಾಗುತ್ತದೆ.

ಈ ರಾಶಿಯವರಿಗೆ ಹನುಮಂತನ ಕೃಪೆ ದೊರೆಯುತ್ತದೆಯಂತೆ….!

-ಜಾತಕದಲ್ಲಿ ಶನಿಯ ಸ್ಥಾನವು ಕೆಟ್ಟದಾಗಿದ್ದರೆ ಏಳು ಮುಖದ ರುದ್ರಾಕ್ಷಿಯನ್ನು ಧರಿಸಿ. ರುದ್ರಾಕ್ಷಿಯನ್ನು ಗಂಗಾಜಲದಲ್ಲಿ ತೊಳೆದು ಸೋಮವಾರ ಅಥವಾ ಶನಿವಾರದಂದು ಧರಿಸಿ. ಇದರಿಂದ ನಿಮ್ಮ ಕೆಲಸ ಪೂರ್ಣಗೊಳ್ಳುತ್ತದೆ.

-ಶನಿವಾರದಂದು ಸ್ನಾನ ಮಾಡಿದ ಬಳಿಕ ಶಮಿ ವೃಕ್ಷಕ್ಕೆ ನೀರನ್ನು ಹಾಕಿ. ಶಮಿ ವೃಕ್ಷವನ್ನು 11 ಸುತ್ತು ಸುತ್ತಿ ಅದರ ಮುಂದೆ ಎಳ್ಳು ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಜೀವನದಲ್ಲಿ ಪ್ರಗತಿ ಸಾಧಿಸಬಹುದು.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...