Kannada Duniya

ವ್ಯವಹಾರದಲ್ಲಿ ಪ್ರಗತಿ ಕಾಣಲು ಇವರು ಪಚ್ಚೆ ರತ್ನವನ್ನು ಧರಿಸಿ…!

ಪಚ್ಚೆ ಹಸಿರು ಬಣ್ಣದಿಂದ ಕೂಡಿರುತ್ತದೆ. ಇದು ವಿದ್ಯಾರ್ಥಿಗಳಿಗೆ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಅದರ ಪರಿಣಾಮದಿಂದ ಬುದ್ಧಿಶಕ್ತಿ ತೀಕ್ಷ್ಣವಾಗುತ್ತದೆ. ಈ ರತ್ನ ವ್ಯಾಪಾರಿಗಳಿಗೆ ತುಂಬಾ ಪ್ರಯೋಜನಕಾರಿ. ಹಾಗಾಗಿ ಈ ರತ್ನವನ್ನು ಯಾರು , ಯಾವಾಗ ಮತ್ತು ಹೇಗೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

ಪಚ್ಚೆ ರತ್ವವನ್ನು ಧರಿಸುವವರು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಇದನ್ನು ಧರಿಸುವುದರಿಂದ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ರೋಗಿಗಳ ರೋಗ ನಿವಾರಣೆಯಾಗುತ್ತದೆ. ಸಂತೋಷ ಪ್ರಾಪ್ತಿಯಾಗುತ್ತದೆ. ಬುಧ ಗ್ರಹವು ಬಲಗೊಳ್ಳುತ್ತದೆ. ಕಣ್ಣಿನ ಸಮಸ್ಯೆ ದೂರವಾಗುತ್ತದೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಪಚ್ಚೆ ರತ್ನವು ಮಿಥುನ ಮತ್ತು ಕನ್ಯಾರಾಶಿಯವರಿಗೆ ಬಹಳ ಫಲಪ್ರದವಾಗಿದೆ. ವೃಷಭ, ತುಲಾ, ಮಕರ, ಮತ್ತು ಕುಂಭ ರಾಶಿಯವರು ಇದನ್ನು ಧರಿಸಬಹುದು. ಆದರೆ ಮೇಷ, ಕಟಕ, ಮತ್ತು ವೃಶ್ಚಿಕ ರಾಶಿಯವರು ಇದನ್ನು ಧರಿಸಬಾರದು. ಹಾಗೇ ಸಿಂಹ, ಧನು ಮತ್ತು ಮೀನ ರಾಶಿಯವರು ಇದನ್ನು ವಿಶೇಷ ಸಂದರ್ಭದಲ್ಲಿ ಧರಿಸಬಹುದು.

ಉದ್ಯೋಗದಲ್ಲಿ ಬಡ್ತಿ ಪಡೆಯಲು ಈ ರತ್ನವನ್ನು ಶುಭವೆಂದು ಪರಿಗಣಿಸಲಾಗುತ್ತದೆ

ಪಚ್ಚೆಯನ್ನು ಬೆಳ್ಳಿ ಅಥವಾ ಚಿನ್ನದ ಉಂಗುರದಲ್ಲಿ ಧರಿಸಿ. ಬುಧವಾರದಂದು ಸಣ್ಣ ಬೆರಳಿನಲ್ಲಿ ಇದನ್ನು ಧರಿಸಬಹುದು. ಸೂರ್ಯೋದಯದಿಂದ ಸುಮಾರು 10 ಗಂಟೆಯೊಳಗೆ ಧರಿಸಬಹುದು. ಧರಿಸುವ ಮುನ್ನ ಹಾಲು, ಗಂಗಾಜಲ, ಜೇನುತುಪ್ಪದಲ್ಲಿ ಶುದ್ಧಿಕರಿಸಿ ಧೂಪ ದೀಪವನ್ನು ತೋರಿಸಿ ಬುಧನ ಮಂತ್ರವನ್ನು ಪಠಿಸುತ್ತಾ ಧರಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...