Kannada Duniya

ವಿಜಯದಶಮಿಯ ದಿನ ಈ ಪಕ್ಷಿಯ ದರ್ಶನ ಮಾಡಿದರೆ ಮಂಗಳಕರವಂತೆ….!

ಪ್ರತಿ ವರ್ಷ ಶುಕ್ಲ ಪಕ್ಷದ ಹತ್ತನೇ ದಿನದಂದು ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ವಿಜಯದಶಮಿ ಅಕ್ಟೋಬರ್ 5ರಂದು ಬಂದಿದೆ. ಈ ದಿನ ಶ್ರೀರಾಮ ರಾವಣನನ್ನು ಕೊಂದನು ಎನ್ನಲಾಗುತ್ತದೆ. ಹಾಗಾಗಿ ಇಂತಹ ಮಂಗಳಕರವಾದ ದಿನದಂದು ಈ ಪಕ್ಷಿಯ ದರ್ಶನ ಮಾಡಿದರೆ ಮಂಗಳಕರವಂತೆ.

ವಿಜಯದಶಮಿಯ ದಿನದಂದು ನೀಲಕಂಠ ಪಕ್ಷಿಯನ್ನು ನೋಡುವುದು ಮಂಗಳಕರವಂತೆ. ಹಾಗಾಗಿ ಈ ದಿನ ಯಾರಾದರೂ ನೀಲಕಂಠ ಪಕ್ಷಿಯನ್ನು ನೋಡಿದರೆ ಆ ವ್ಯಕ್ತಿಯ ಮನೆಯಲ್ಲಿ ಹಣ ಮತ್ತು ಧಾನ್ಯ ತುಂಬಿರುತ್ತದೆಯಂತೆ. ಆತನ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆಯಂತೆ.

ಬುಧನು ಉನ್ನತ ಸ್ಥಿತಿಯಲ್ಲಿದ್ದು, ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆ….!

ನೀಲಕಂಠ ಪಕ್ಷಿ ಶಿವನ ಸಂಕೇತವಂತೆ. ಯಾಕೆಂದರೆ ರಾವಣನ ಕೊಂದ ನಂತರ ರಾಮನಿಗೆ ಬ್ರಾಹ್ಮಣ ಹತ್ಯೆ ದೋಷ ಉಂಟಾಗಿದ್ದು, ಇದನ್ನು ಪರಿಹರಿಸಲು ಶ್ರೀರಾಮ ಶಿವನನ್ನು ಆರಾಧನೆ ಮಾಡಿದ್ದಾನಂತೆ. ಆ ವೇಳೆ ಶಿವ ನೀಲಕಂಠ ಪಕ್ಷಿಯ ರೂಪದಲ್ಲಿ ಕಾಣಿಸಿಕೊಂಡು ಪಾಪಗಳನ್ನು ನಿವಾರಿಸಿದ ಎನ್ನಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...