Kannada Duniya

ರಥ ಸಪ್ತಮಿ ದಿನ ಈ ಕೆಲಸ ಮಾಡಿ ನಿಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

ಹಿಂದೂ ಕ್ಯಾಲೆಂಡರ್ ನ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ದಿನದಂದು ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಈ ದಿನ ಸೂರ್ಯದೇವ ಜನಿಸಿದನು ಎಂದು ನಂಬಲಾಗಿದೆ. ಹಾಗಾಗಿ ಈ ವರ್ಷ ರಥಸಪ್ತಮಿ ಫೆಬ್ರವರಿ 16ರಂದು ಆಚರಿಸಲಾಗುತ್ತದೆ. ಈ ದಿನ ಕೆಲಸ ಮಾಡಿದರೆ ನಿಮ್ಮ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆಯಂತೆ.

ರಥಸಪ್ತಮಿಯ ದಿನ ಸೂರ್ಯದೇವನನ್ನು ಪೂಜಿಸಲಾಗುತ್ತದೆ. ಹಾಗಾಗಿ ಸೂರ್ಯ ಉದಯಿಸುವ ಮುನ್ನ ಎದ್ದು ಸ್ನಾನಾಧಿಗಳನ್ನು ಮಾಡಿ ಹಳದಿ ಬಣ್ಣದ ಬಟ್ಟೆ ಧರಿಸಿ ಸೂರ್ಯನಿಗೆ ತಾಮ್ರದ ಬಿಂದಿಗೆಯಲ್ಲಿ ನೀರನ್ನು ಅರ್ಪಿಸಿ. ನಂತರ ಸೂರ್ಯನು ಏಳು ಕುದುರೆಯ ರಥದಲ್ಲಿ ಬರುವಂತಹ ಫೋಟೊಗೆ ಪೂಜೆ ಸಲ್ಲಿಸಿ.

ಈ ದಿನ ನೀವು ಸೂರ್ಯದೇವನನ್ನು ಪೂಜಿಸುವುದರಿಂದ ನಿಮ್ಮ ದೋಷಗಳು ನಿವಾರಣೆಯಾಗುತ್ತದೆಯಂತೆ. ಹಾಗೇ ನೀವು ರೋಗ ರುಜಿನಗಳಿಂದ ಮುಕ್ತರಾಗುತ್ತೀರಂತೆ. ಈ ದಿನ ನಿಮಗೆ ಶುಭ ಫಲಿತಾಂಶಗಳು ದೊರೆಯುತ್ತದೆಯಂತೆ. ಹಾಗೇ ಸೂರ್ಯನ ಅನುಗ್ರಹದಿಂದ ನಿಮ್ಮ ಕಾರ್ಯಗಳು ಸಂಪೂರ್ಣವಾಗಲಿದೆ. ನಿಮಗೆ ತಂದೆಯ ಬೆಂಬಲ ಸಿಗಲಿದೆ. ಜೀವನದಲ್ಲಿ ಏಳಿಗೆ ಕಾಣುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...