Kannada Duniya

ಮೌನಿ ಅಮಾವಾಸ್ಯೆಯ ದಿನ ಈ ಪರಿಹಾರವನ್ನು ಮಾಡಿ ಶನಿಯ ಕೆಟ್ಟ ದೃಷ್ಟಿಯನ್ನು ನಿವಾರಿಸಿಕೊಳ್ಳಿ

ಹಿಂದೂಧರ್ಮದಲ್ಲಿ ಮೌನಿ ಅಮಾವಾಸ್ಯೆಗೆ ಹೆಚ್ಚಿನ ಮಹತ್ವವಿದೆ. ಈ ದಿನ ಋಷಿಮುನಿಗಳು ಜನಿಸಿದರು ಮತ್ತು ದೇವರು ಮತ್ತು ಪೂರ್ವಜರ ಸಂಗಮವಾಗಲಿದೆ ಎಂಬ ನಂಬಿಕೆ ಇದೆ. ಈ ವರ್ಷ ಮೌನಿ ಅಮಾವಾಸ್ಯೆ ಫೆಬ್ರವರಿ 9ಕ್ಕೆ ಬಂದಿದೆ. ಹಾಗಾಗಿ ಇಂತಹ ವಿಶೇಷವಾದ ದಿನದಂದು ಕೆಲವು ಪರಿಹಾರಗಳನ್ನು ಮಾಡಿದರೆ ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದಂತೆ.

ಶನಿಯ ದೋಷವನ್ನು ನಿವಾರಿಸಲು ಈ ದಿನ ಸಂಜೆ ಅರಳೀಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಹಚ್ಚಿ ಶನಿಶ್ವರನ ನಾಮವನ್ನು ಜಪಿಸಿ. ಇದರಿಂದ ಶನಿಯ ಅನುಗ್ರಹ ದೊರೆಯುತ್ತದೆ.

ಅಲ್ಲದೇ ಈ ದಿನ ಬಡವರಿಗೆ, ನಿರ್ಗತಿಕರಿಗೆ ಸಾಸಿವೆ ಎಣ್ಣೆಯನ್ನು ದಾನ ಮಾಡಿ. ಹಾಗೇ ಈ ದಿನ ಕಪ್ಪು ಎಳ್ಳು ಮತ್ತು ಸಕ್ಕರೆ ಬೆರೆಸಿದ ಸಿಹಿಯನ್ನು ಇರುವೆಗಳಿಗೆ ತಿನ್ನಿಸಿ. ಹೀಗೆ ಮಾಡುವುದರಿಮದ ಶನಿಯ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು.

ಅಲ್ಲದೇ ಈ ದಿನ ಕಪ್ಪು ಎಳ್ಳುಂಡೆ, ಕಂಬಳಿ, ಕಪ್ಪು ವಸ್ತ್ರವನ್ನು ದಾನ ಮಾಡಿ. ಹಾಗೇ ಶನಿದೇವರ ದೇವಸ್ಥಾನಕ್ಕೆ ಹೋಗಿ ಶನಿದೇವರ ಪೂಜೆ ಮಾಡಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...