Kannada Duniya

ಮೋದಕದ ಬದಲು ಈ ವಸ್ತುಗಳನ್ನು ಅರ್ಪಿಸಿದರೆ ಗಣೇಶನ ಅನುಗ್ರಹ ದೊರೆಯುತ್ತದೆಯಂತೆ…!

ಹಿಂದೂಧರ್ಮದಲ್ಲಿ ಗಣಪತಿಯನ್ನು ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಯಾಕೆಂದರೆ ಈತ ನಿಮಗೆ ಎದುರಾದ ಯಾವುದೇ ಸಂಕಷ್ಟಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ ಯಾವುದೇ ಕಾರ್ಯಗಳನ್ನು ಮಾಡುವ ಮುನ್ನ ಗಣಪತಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಗಣೇಶನ ಅನುಗ್ರಹ ಪಡೆಯಲು ಆತನಿಗೆ ಪ್ರಿಯವಾದ ಮೋದಕದ ಬದಲು ಈ ವಸ್ತುಗಳನ್ನು ಅರ್ಪಿಸಬಹುದಂತೆ.

ಗಣೇಶನಿಗೆ ಲಡ್ಡುಗಳೆಂದರೆ ತುಂಬಾ ಇಷ್ಟ. ಹಾಗಾಗಿ ಗಣೇಶನಿಗೆ ಬೇಳೆ ಹಿಟ್ಟಿನಿಂದ ತಯಾರಿಸಿದ ಲಡ್ಡುಗಳನ್ನು ಅರ್ಪಿಸಿ. ಇದರಿಂದ ನಿಮಗಿರುವ ಸಂಕಷ್ಟಗಳು ದೂರವಾಗುತ್ತದೆ.

ಹಾಗೇ ಗಣಪತಿಗೆ ಖೀರ್ ತುಂಬಾ ಪ್ರಿಯವಾದುದು. ಹಾಗಾಗಿ ಗಣೇಶನಿಗೆ ಅಕ್ಕಿ, ಹಾಲಿನಿಂದ ತಯಾರಿಸಿದ ಖೀರ್ ಅನ್ನು ಅರ್ಪಿಸಿ. ಇದರಿಂದ ನಿಮ್ಮ ಜೀವನದಲ್ಲಿ ಸುಖ,ಶಾಂತಿ ನೆಲೆಸಿರುತ್ತದೆಯಂತೆ.

Blessed by Ganesha: ಈ ರಾಶಿಯವರಿಗೆ ಜೀವನದಲ್ಲಿ ಅಡೆತಡೆಗಳು ಎದುರಾದರೆ ಅದನ್ನು ಗಣೇಶ ನಿವಾರಿಸುತ್ತಾನಂತೆ…!

ಬಾಳೆಹಣ್ಣು : ಹಿಂದೂ ಧರ್ಮದಲ್ಲಿ ದೇವರ ಪೂಜೆಯಲ್ಲಿ ಬಾಳೆಹಣ್ಣಿನ್ನು ಬಳಸುತ್ತಾರೆ. ಇದರಿಂದ ದೇವರ ಅನುಗ್ರಹ ದೊರೆಯುತ್ತದೆ ಎಂಬುದು ಅವರ ನಂಬಿಕೆ. ಹಾಗಾಗಿ ಗಣಪತಿಗೆ ಪೂಜೆಯ ವೇಳೆ ಬಾಳೆಹಣ್ಣ ನ್ನು ಅರ್ಪಿಸಿದರೆ ಆತನ ಅನುಗ್ರಹ ದೊರೆಯುತ್ತದೆ ಎನ್ನಲಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...