Kannada Duniya

ಮನಸ್ಸಿನ ನೋವನ್ನು ಮರೆಯಲು ಈ ವಿಧಾನ ಅನುಸರಿಸಿ ನೋಡಿ….!

ನಿಮ್ಮ ಹೃದಯ ಮುರಿದು ಹೋಗಿದೆಯೇ…? ಪ್ರೀತಿ ಕೈಕೊಟ್ಟಿದೆಯೇ…? ಸಂಸಾರದಲ್ಲಿ ಒಡಕು ಮೂಡಿದೆಯೇ? ಕೆಲಸ ಕೈತಪ್ಪಿ ಹೋಗಿದೆಯೇ? ವಿನಾಕಾರಣ ಬೇಸರಿಸುತ್ತಾ ಕೂತರೆ ಪ್ರಯೋಜನವಿಲ್ಲ. ಇದರಿಂದ ಹೊರಬಂದು ನಿಮ್ಮ ಮನಸ್ಸಿಗೆ ಸಾಂತ್ವನ ತುಂಬುವ ಕಾರ್ಯ ನಿಮ್ಮಿಂದಲೇ ಆರಂಭವಾಗಬೇಕು.

ಈವರೆಗೆ ಇತರರಿಗೆ ದುಡಿದದ್ದು ಸಾಕು. ಸ್ವಯಂ ಕಾಳಜಿ ಆರೈಕೆಗೆ ಇದು ಸರಿಯಾದ ಸಮಯ ಎಂಬುದನ್ನು ತಿಳಿದುಕೊಳ್ಳಿ. ದೀರ್ಘ ನಡಿಗೆ ಯೋಗಭ್ಯಾಸ ಅಥವಾ ನಿಮಗೆ ಖುಷಿ ಕೊಡುವ ಇನ್ನು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಇದು ನಿಮಗೆ ದೈಹಿಕ ಚಟುವಟಿಕೆ ನೀಡುವಂತಿರಲಿ.

ಆತ್ಮಾವಲೋಕನಕ್ಕಿದು ಸಕಾಲ. ನಿಮಗೆ ಇದು ಸಾಧ್ಯವಾಗದೇ ಹೋದರೆ ಕೌನ್ಸಿಲರ್ ಸಹಾಯ ಪಡೆದುಕೊಳ್ಳಿ.

ನಿಮ್ಮ ಹವ್ಯಾಸಗಳನ್ನು ಮತ್ತೆ ನೆನಪಿಸಿಕೊಳ್ಳಿ. ಹಾಡು ಹೇಳುವ, ಚಿತ್ರ ಬಿಡಿಸುವ, ಅಡುಗೆ ಮಾಡುವ ಕೆಲಸದಲ್ಲಿ ಮತ್ತೆ ತೊಡಗಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಫ್ರೆಶ್ ಆಗುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ.

ಹಸಿವಿನ ಕೊರತೆಯಿಂದ ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಾದರೆ ಈ ನಿಯಮ ಪಾಲಿಸಿ….!

ಅದೇ ರೀತಿ ನಿಮ್ಮ ಮಾತನ್ನು ಕೇಳುವ ಅಥವಾ ನಿಮಗೆ ಸಾಂತ್ವಾನ ಹೇಳಬಲ್ಲ ಆತ್ಮೀಯರೊಂದಿಗೆ ಒಡನಾಟ ಇಟ್ಟುಕೊಳ್ಳಿ. ಮನಸ್ಸಿನ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...