Kannada Duniya

ಧೂಮಪಾನದ ಚಟವನ್ನು ತೊರೆಯಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಿ

ಕೆಲವರಿಗೆ ಬೀಡಿ ಸಿಗರೇಟ್ ಸೇದುವಂತಹ ಅಭ್ಯಾಸವಿರುತ್ತದೆ. ಇದು ಅವರಿಗೆ ಚಟವಾಗಿರುತ್ತದೆ. ಹಾಗಾಗಿ ಅವರಿಗೆ ಅದನ್ನು ಬಿಟ್ಟುಬಿಡುವುದು ಬಹಳ ಕಷ್ಟವಾಗುತ್ತದೆ. ಅಂತವರು ಈ ಚಟದಿಂದ ಹೊರಬರಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಿ.

ಹಾಲು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಧೂಮಪಾನ ಚಟದಿಂದ ಹೊರಬರಲು ಸಹಾಯ ಮಾಡುತ್ತದೆ. ಹಾಲು ಕುಡಿಯುವವರಿಗೆ ಸಿಗರೇಟ್ ನ ರುಚಿ ಕಹಿಯೆನಿಸುತ್ತದೆ. ಹಾಗಾಗಿ ಹಾಲನ್ನು ಪ್ರತಿದಿನ ಕುಡಿಯಿರಿ.

ಧೂಮಪಾನ ಚಟವನ್ನು ಬಿಡಲು ಬಯಸುವವರು ಮುಲೇತಿಯನ್ನು ಸೇವಿಸಿ. ಇದು ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಧೂಮಪಾನ ಬಿಡಲು ನಿಮ್ಮ ಬಾಯಲ್ಲಿ ಮುಲೇತಿಯನ್ನು ಇಟ್ಟುಕೊಂಡು ಜಗಿಯಿರಿ.

ಸಿಗರೇಟ್ ಸೇದುವ ಹಂಬಲವನ್ನು ತ್ಯಜಿಸಲು ದಾಲ್ಚಿನ್ನಿಯನ್ನು ಸೇವಿಸಿ. ಇದು ರುಚಿ ಕಟುವಾಗಿರುವುದರಿಂದ ಇದು ಧೂಮಪಾನದ ರುಚಿಯನ್ನು ಕೆಡಿಸುತ್ತದೆ.
ಧೂಮಪಾನವನ್ನು ತ್ಯಜಿಸಲು ಬಯಸುವವರು ಕರಿಮೆಣಸನ್ನು ಬಳಸಿ. ಇದು ಧೂಮಪಾನದ ಚಟವನ್ನು ಕಡಿಮೆ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...