Kannada Duniya

ಮಣಿಕಟ್ಟಿನ ಮೇಲಿರುವ ಈ ರೇಖೆ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆಯಂತೆ….!

ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಸ್ಥಾನವನ್ನು ನೋಡಿ ಅವರ ಭವಿಷ್ಯದ ಬಗ್ಗೆ ತಿಳಿಯುತ್ತಾರೆ. ಅದರಂತೆ ವ್ಯಕ್ತಿಯ ಹಸ್ತರೇಖೆಗಳು ಮತ್ತು ಗುರುತುಗಳ ಮೂಲಕ ಕೂಡ ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದಂತೆ. ಅದರಂತೆ ಮಣಿಕಟ್ಟಿನ ಮೇಲಿರುವ ಈ ರೇಖೆ ನಿಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುತ್ತದೆಯಂತೆ.

ಮಣಿಕಟ್ಟಿನಿಂದ ಒಂದು ರೇಖೆ ಗುರು ಪರ್ವತಕ್ಕೆ ಹೋದರೆ ಹಾಗೇ ಮಣಿಕಟ್ಟಿನಲ್ಲಿ ಕ್ರಾಸ್ ಅಥವಾ ಕೋನಾಕ್ರತಿ ಇದ್ದರೆ ಅಂತಹ ವ್ಯಕ್ತಿ ಭೌತಿಕ ಸುಖವನ್ನು ಪಡೆಯುತ್ತಾನಂತೆ. ಹಾಗೇ ಇವರ ಕುಟುಂಬ ಜೀವನ ಸುಖಕರವಾಗಿರುತ್ತದೆಯಂತೆ.

ಮಣಿಕಟ್ಟಿನ ಮೊದಲ ರೇಖೆಯಲ್ಲಿ ನಕ್ಷತ್ರದ ಚಿಹ್ನೆ ಇದ್ದರೆ ತುಂಬಾ ಮಂಗಳಕರವಂತೆ. ಅಂತವರು ಪಿತ್ರಾರ್ಜಿತ ಆಸ್ತಿಯ ಪ್ರಯೋಜನವನ್ನು ಪಡೆಯುತ್ತಾರಂತೆ. ಇವರು ಐಷಾರಾಮಿ ಜೀವನವನ್ನು ನಡೆಸುತ್ತಾರಂತೆ.

ಹನುಮಾನ್ ಚಾಲಿಸ್ ಈ ಮರದ ಕೆಳಗೆ ಕುಳಿತು ಪಠಣೆ ಮಾಡಿದರೆ ಬಹಳ ಬೇಗನೆ ಶ್ರೀಮಂತರಾಗುತ್ತೀರಿ…!

ಮಣಿಕಟ್ಟಿನಲ್ಲಿ ತ್ರಿಕೋನಾಕಾರದ ಚಿಹ್ನೆ ಇದ್ದರೆ ಆ ವ್ಯಕ್ತಿ ಹಣವನ್ನು ಪಡೆಯುತ್ತಾನಂತೆ. ಇವರು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...