Kannada Duniya

‘ಫೋಟೋವನ್ನು’ ಹಾಕುವಾಗ ಇದನ್ನು ಫಾಲೋ ಮಾಡಿ…!

ಕೆಲವರು ಮನೆಯನ್ನು ಫೋಟೊಗಳಿಂದ ಅಲಂಕರಿಸುತ್ತಾರೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಫೈಟಿಂಗ್ ಗಳು ಬರುತ್ತವೆ.

ಇವು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದನ್ನು ಮನೆಯಲ್ಲಿ ನೇತು ಹಾಕುತ್ತಾರೆ. ಆದರೆ ಇವುಗಳನ್ನು ನೇತು ಹಾಕುವಾಗ ವಾಸ್ತು ನಿಯಮ ಪಾಲಿಸಿ.ಅದಕ್ಕಾಗಿ ಸರಿಯಾದ ದಿಕ್ಕಿನಲ್ಲಿ ನೇತು ಹಾಕಿ ಇಲ್ಲವಾದರೆ ಹಲವು ಸಮಸ್ಯೆಗಳು ಕಾಡುತ್ತವೆ.

ಕುಟುಂಬದ ಫೋಟೊವನ್ನು ಮನೆಯಲ್ಲಿ ಹಾಕುವುದಾದರೆ ದಕ್ಷಿಣ ಗೋಡೆಯ ಮೇಲೆ ಇಡಬೇಕು. ಇದನ್ನು ಹಾಸಿಗೆಯ ಹಿಂದೆ ಹಾಕಬಾರದು. ಇಲ್ಲವಾದರೆ ನೈರುತ್ಯ ದಿಕ್ಕಿನಲ್ಲಿ ಹಾಕಿ. ಇದರಿಂದ ಮನೆಯ ಯಜಮಾನನಿಗೆ ಒಳ್ಳೆಯದಾಗುತ್ತದೆ.

ಕುಟುಂಬ ಫೋಟೊವನ್ನು ಮನೆಯಲ್ಲಿ ಹಾಕುತ್ತಿದ್ದರೆ ಅದರ ಫ್ರೇಮ್ ಕೆಂಪು ಬಣ್ಣ ದಲ್ಲಿರಬೇಕು. ಇದು ಮಂಗಳಕರವಾಗಿರುತ್ತದೆ. ಇದರಿಂದ ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ.

ಮಕ್ಕಳ ಚಿತ್ರವನ್ನು ಹಾಕುತ್ತಿದ್ದರೆ ಅದನ್ನು ಯಾವಾಗಲೂ ಪಶ್ಚಿಮ ದಿಕ್ಕಿನಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹಾಕಬೇಕು. ಇದರಿಂದ ಮಕ್ಕಳಲ್ಲಿ ಜ್ಞಾನ ಮತ್ತು ಬುದ್ದಿವಂತಿಕೆ ಹೆಚ್ಚಾಗುತ್ತದೆ.

ಮನೆಯಲ್ಲಿ ಗೋಡೆಗೆ ನದಿ, ಸಮುದ್ರ, ಜಲಪಾತ, ಕಾರಂಜಿ ಮುಂತಾದ ಚಿತ್ರಗಳನ್ನು ಹಾಕುವುದಾದರೆ ಅವುಗಳನ್ನು ಯಾವಾಗಲೂ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಿಸಿ.

ವ್ಯಾಪಾರದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ಈ ಕ್ರಮಗಳನ್ನು ಅನುಸರಿಸಿ

ಪ್ರಕೃತಿ ಮತ್ತು ಧಾರ್ಮಿಕ ಫೋಟೊಗಳು ಅಂದರೆ ಸೂರ್ಯ ಉದಯಿಸುತ್ತಿರುವ, ಕಾಡು, ಧಾರ್ಮಿಕ ಚಿತ್ರಗಳು, ಪೂರ್ವಜರ ಫೋಟೊಗಳನ್ನು ಪೂರ್ವ ದಿಕ್ಕಿನಲ್ಲಿ ಹಾಕಿ. ಆದರೆ ಪೂರ್ವಜರ ಫೋಟೊವನ್ನು ಮಲಗುವ ಕೋಣೆ, ಅಡುಗೆ ಮನೆ, ದೇವರ ಕೊಣೆಯಲ್ಲಿ ಹಾಕಬೇಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...