Kannada Duniya

ಫೆಬ್ರವರಿಯಲ್ಲಿ ಬುಧ-ಮಂಗಳ ಸಂಯೋಗ; ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ

ಗ್ರಹಗಳು ಒಂದರ ಜೊತೆ ಒಂದು ಸಂಯೋಗಗೊಂಡಾಗ ಅದರಿಂದ ಶುಭ ಮತ್ತು ಅಶುಭ ಪರಿಣಾಮಗಳು ಬೀರುತ್ತದೆ. ಅದರಂತೆ ಫೆಬ್ರವರಿ 1 ರಂದು ಬುಧನು ಮಕರ ರಾಶಿಗೆ ಪ್ರವೇಶಿಸಿದರೆ ಫೆಬ್ರವರಿ 5ರಂದು ಮಂಗಳನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದರಿಂದ ಮಕರ ರಾಶಿಯಲ್ಲಿ ಬುಧ ಮತ್ತು ಮಂಗಳನ ಸಂಯೋಗವಾಗುತ್ತದೆ. ಇದರಿಂದ ಈ ರಾಶಿಯವರಿಗೆ ಒಳ್ಳೆಯದಾಗಲಿದೆಯಂತೆ.

ಮೇಷ ರಾಶಿ : ನೀವು ಇದ್ದಕ್ಕಿದ್ದಂತೆ ಹಣವನ್ನು ಗಳಿಸುತ್ತೀರಿ. ನೀವು ವೃತ್ತಿ ಕ್ಷೇತ್ರದಲ್ಲಿ ಅಪಾರ ಯಶಸ್ಸಿನೊಂದಿಗೆ ಹಣವನ್ನು ಗಳಿಸುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಜಾಗ್ರತೆ ವಹಿಸಿ.

ವೃಶ್ಚಿಕ ರಾಶಿ : ನೀವು ಸಾಲದಿಂದ ಮುಕ್ತರಾಗುತ್ತೀರಿ. ನೀವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸುತ್ತೀರಿ. ನಿಮ್ಮ ಸಂಪತ್ತು ಹೆಚ್ಚಾಗಲಿದೆ. ನಿಮಗೆ ಉದ್ಯೋಗವಕಾಶಗಳು ಹುಡುಕಿ ಬರಲಿದೆ.

ಮಕರ ರಾಶಿ : ನೀವು ಎಲ್ಲಾ ಕ್ಷೇತ್ರದಲ್ಲೂ ಪ್ರಯೋಜನ ಪಡೆಯುತ್ತೀರಿ. ನೀವು ಹಿರಿಯರು ಮತ್ತು ಸಹದ್ಯೋಗಿಗಳ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ವೃತ್ತಿ ಜೀವನದಲ್ಲಿ ಸಕರಾತ್ಮಕ ಪರಿಣಾಮ ಬೀರಲಿದೆ. ಇತರರೊಂದಿಗೆ ತಾಳ್ಮೆಯಿಂದ ವ್ಯವಹರಿಸಿದರೆ ಒಳಿತಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...