Kannada Duniya

ಪ್ರೇಮಿಗಳ ದಿನದಂದು ನಿಮ್ಮ ರಾಶಿಗನುಗುಣವಾಗಿ ಬಣ್ಣದ ಬಟ್ಟೆ ಧರಿಸಿ ನಿಮ್ಮ ಸಂಬಂಧ ಉತ್ತಮವಾಗಿಸಿ…!

ಪ್ರೇಮಿಗಳ ದಿನದಂದು ಪ್ರೇಮಿಗಳು ಒಬ್ಬರನೊಬ್ಬರು ಭೇಟಿ ಮಾಡುವ ಸಂಭ್ರಮಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ ಈ ಸಮಯದಲ್ಲಿ ನಿಮ್ಮಸಂಬಂಧದಲ್ಲಿ ಪ್ರೀತಿ ಹೆಚ್ಚಾಗುವಂತೆ ಮಾಡಲು ಈ ದಿನ ನಿಮ್ಮ ರಾಶಿಗನುಗುಣವಾಗಿ ಈ ಬಣ್ಣದ ಬಟ್ಟೆಗಳನ್ನು ಧರಿಸಿ.

ಮೇಷ : ಈ ದಿನ ನೀವು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ. ಇಲ್ಲವಾದರೆ ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ. ಇದರಿಂದ ನಿಮ್ಮ ಸಂಬಂಧದಲ್ಲಿ ಪ್ರೀತಿ, ಸಂತೋಷ ಹೆಚ್ಚಾಗುತ್ತದೆ.

ವೃಷಭ : ಈ ದಿನ ನೀವು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ. ಇದು ನಿಮ್ಮಲ್ಲಿ ಸಕರಾತ್ಮಕ ಆಲೋಚನೆಯನ್ನು ತರುತ್ತದೆ ಮತ್ತು ಇದರಿಂದ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.

ಮಿಥುನ : ಈ ರಾಶಿಯವರು ಕೇಸರಿ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ. ಹಾಗೇ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ಕಟಕ ರಾಶಿ : ಇವರು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಉತ್ತಮ. ಇದರಿಂದ ನಿಮ್ಮ ಸಂಬಂಧ ಬಲಗೊಳ್ಳುತ್ತದೆ ಮತ್ತು ಈ ಬಣ್ಣ: ನಿಮಗೆ ಅದೃಷ್ಟವನ್ನು ತರುತ್ತದೆ.

ಸಿಂಹ : ಈ ದಿನ ನೀವು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಇದರಿಂದ ನಿಮ್ಮ ನಡುವೆ ಪರಸ್ಪರ ಪ್ರೀತಿಯನ್ನು ಕಾಪಾಡಿಕೊಳ್ಳಬಹುದು.

Positivity at Home: ಮನೆಯಲ್ಲಿ ಸಕರಾತ್ಮಕ ಶಕ್ತಿಯನ್ನು ಹೆಚ್ಚಿಸಲು ಮನೆಯ ಒಳಾಂಗಣದಲ್ಲಿ ಈ ಸಸ್ಯವನ್ನು ಬೆಳೆಸಿ…!

ಕನ್ಯಾ : ನೀವು ಈ ದಿನ ಸಂಗಾತಿಯನ್ನು ಮೆಚ್ಚಿಸಲು ನೀಲಿ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿ. ಇದು ನಿಮ್ಮ ನಡುವೆ ಪ್ರೀತಿ ಕಾಳಜಿಯನ್ನು ತುಂಬುತ್ತದೆ.

ತುಲಾ : ಈ ರಾಶಿಯವರು ಪ್ರೇಮಿಗಳ ದಿನದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಮತ್ತು ನಿಮ್ಮ ನಡುವೆ ಪ್ರೀತಿ ಹೆಚ್ಚಾಗುತ್ತದೆ.

ವೃಶ್ಚಿಕ : ನಿಮಗೆ ಕೇಸರಿ ಬಣ್ಣ ದ ಬಟ್ಟೆ ಬಹಳ ಶುಭಕರ. ಈ ಬಣ್ಣ ದ ಬಟ್ಟೆ ಧರಿಸಿದರೆ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.

ಧನು : ನೀವು ಈ ದಿನ ಕೆಂಪು ಬಣ್ಣ ದ ಬಟ್ಟೆಗಳನ್ನು ಧರಿಸಿ ಸಂಗಾತಿಯನ್ನು ಮೆಚ್ಚಿಸಿದರೆ ಒಳ್ಳೆಯದು. ಇದು ಪ್ರೀತಿಯ ಬಣ್ಣವಾದ್ದರಿಂದ ಇದರಿಂದ ನಿಮ್ಮ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ.

ಮಕರ : ನೀವು ಕ್ರೀಂ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಇದರಿಂದ ನಿಮಗೆ ಶುಭವಾಗಲಿದೆ. ಇದರಿಂದ ನಿಮ್ಮ ಸಂಗಾತಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುತ್ತದೆ.

ಕುಂಭ : ಈ ದಿನ ನೀವು ಸಂಗಾತಿಯನ್ನು ಮೆಚ್ಚಿಸಲು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿ. ಇದು ನಿಮ್ಮ ಜೀವನದಲ್ಲಿ ಸಂತೋಷವನ್ನು ತರಲು ಸಹಾಯ ಮಾಡುತ್ತದೆ.

ಮೀನ : ನೀವು ಬಿಳಿ ಬಣ್ಣದ ಬಟ್ಟೆಗಳನ್ನು ಆರಿಸಿ. ಇದರಿಂದ ಅವರಿಗೆ ಒಳ್ಳೆಯದಾಗಲಿದೆ. ಹಾಗೇ ನಿಮ್ಮ ನಡುವೆ ಪ್ರೀತಿ, ಸಂತೋಷ ಹೆಚ್ಚಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...