Kannada Duniya

ತುಳಸಿ ಗಿಡ ಒಣಗಿ ಹೋಗಿದ್ದರೆ ಅದನ್ನು ಕಿತ್ತು ಹಾಕುವಾಗ ಈ ನಿಯಮ ಪಾಲಿಸಿ….!

ಹಿಂದೂಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ತುಳಸಿಯನ್ನು ಲಕ್ಷ್ಮಿದೇವಿಯ ಸ್ವರೂಪವೆಂದು ಪೂಜಿಸುತ್ತಾರೆ. ಹಾಗಾಗಿ ತುಳಸಿ ಗಿಡ ಒಣಗಿ ಹೋಗಿದ್ದರೆ ಅದು ಸಾಮಾನ್ಯ ಗಿಡಗಳಂತೆ ಕಿತ್ತು ಹಾಕಬೇಡಿ. ಅದಕ್ಕಾಗಿ ಈ ನಿಯಮ ಪಾಲಿಸಿ.

ವಾಸ್ತು ಪ್ರಕಾರ, ಸೂರ್ಯಗ್ರಹಣ , ಚಂದ್ರಗ್ರಹಣ, ಹುಣ್ಣಿಮೆ, ಅಮಾವಾಸ್ಯೆ, ಏಕಾದಶಿ, ಭಾನುವಾರ, ಸೂತಕ, ಪಿತೃಪಕ್ಷದ ದಿನದಂದು ತುಳಸಿ ಗಿಡವನ್ನು ಬೇರುಸಹಿತ ಕಿತ್ತು ಹಾಕಬಾರದು. ಹಾಗೇ ಬೇರೆ ಸಮಯದಲ್ಲಿ ತುಳಸಿ ಗಿಡವನ್ನು ಕೀಳುವಾಗ ಸ್ನಾನ ಮಾಡಿ. ಮತ್ತು ಅದಕ್ಕೆ ಸ್ವಲ್ಪ ನೀರು ಹಾಕಿ ಲಕ್ಷ್ಮಿವಿಷ್ಣುವನ್ನು ಧ್ಯಾನಿಸುತ್ತಾ ತುಳಸಿ ಗಿಡವನ್ನು ಕೀಳಿ. ನಂತರ ಅದನ್ನು ಹರಿಯುವ ನದಿಗೆ ಹಾಕಿ.

 Chanyaka niti : ಈ ವಿಷಯಗಳನ್ನು ಮಾತ್ರ ನೆನಪಿನಲ್ಲಿಡಿ, ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ, ನೀವು ಯಾವಾಗಲೂ ಶ್ರೀಮಂತರಾಗಿರುತ್ತೀರಿ…!

ಹಾಗೇ ಒಣಗಿದ ತುಳಸಿಯ ಏಳು ಕಾಂಡಗಳನ್ನು ತೆಗೆದುಕೊಂಡು ಅವುಗಳನ್ನು ಹತ್ತಿ ದಾರದಲ್ಲಿ ಕಟ್ಟಿ ಹಸುವಿನ ತುಪ್ಪದಲ್ಲಿ ಅದ್ದಿ ನಂತರ ಅದನ್ನು ದೀಪದಲ್ಲಿ ಸುಟ್ಟು ಹಾಕಿ. ಇದರಿಂದ ನೀವು ಪ್ರತಿ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುತ್ತಾನೆ. ಹಾಗೇ ಅವನಿಗೆ ಸುಖ, ಸಂತೋಷ, ಸಮೃದ್ಧಿ ನೆಲೆಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...