Kannada Duniya

ಗಣೇಶ ಮೂರ್ತಿಯನ್ನು ಖರೀದಿಸುವಾಗ ಈ ವಿಚಾರ ತಿಳಿದಿರಿ…!

ಮನೆಯಲ್ಲಿ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹವನ್ನಿಟ್ಟು ಪೂಜೆ ಮಾಡಿದರೆ ಮನೆಯಲ್ಲಿರುವ ನಕರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿ ನೆಲೆಸಿರುತ್ತದೆಯಂತೆ. ಇದರಿಂದ ಮನೆಯ ಸದಸ್ಯರಿಗೆ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ. ಆದರೆ ಗಣೇಶನ ಮೂರ್ತಿಯನ್ನು ಖರೀದಿಸುವಾಗ ಈ ವಿಚಾರ ನೆನಪಿರಲಿ.

ಮನೆಗೆ ತರುವಂತಹ ಗಣೇಶನ ಮೂರ್ತಿ ಕುಳಿತುಕೊಂಡಿರುವ ಅಥವಾ ಮಲಗಿರುವ ಭಂಗಿಯಲ್ಲಿರಬೇಕು. ಲಲಿತಾಸನದಲ್ಲಿ ಕುಳಿತಿರುವ ಗಣೇಶನ ವಿಗ್ರಹ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಇದು ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆಯಂತೆ.

ಸಂಧಿವಾತ ಸಮಸ್ಯೆ ನಿವಾರಣೆಯಾಗಬೇಕಾದರೆ ಈ ವಾಸ್ತು ಟ್ರೈ ಮಾಡಬಹುದಂತೆ…!

ಹಾಗೇ ಮನೆಗೆ ತರುವಂತಹ ಗಣೇಶನ ವಿಗ್ರಹದ ಸೊಂಡಿಲು ಎಡಕ್ಕೆ ವಾಲಿದ್ದರೆ ಒಳ್ಳೆಯದಂತೆ . ಇದು ಯಶಸ್ಸು ಮತ್ತು ಸಕರಾತ್ಮಕತೆಯನ್ನು ತರುತ್ತದೆಯಂತೆ.
ಮನೆಗೆ ತರುವಂತಹ ಗಣೇಶನ ವಿಗ್ರಹದ ಜೊತೆಗೆ ಇಲಿ ಮತ್ತು ಮೋದಕವಿರಬೇಕಂತೆ. ಇದು ನಿಮ್ಮ ಆಸೆಗಳನ್ನು ಈಡೇರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...