Kannada Duniya

ಚಳಿಗಾಲದಲ್ಲಿ ಹಣ್ಣು ಮತ್ತು ಹಣ್ಣಿನ ರಸದಲ್ಲಿ ಯಾವುದು ಒಳ್ಳೆಯದು

ಹೆಚ್ಚಿನ ಜನರು ತಮ್ಮ ದೇಹವನ್ನು ಫಿಟ್ ಆಗಿ ಆರೋಗ್ಯವಾಗಿರಿಸಲು ಪ್ರತಿದಿನ ಹಣ್ಣುಗಳನ್ನು ಸೇವಿಸುತ್ತಾರೆ. ಕೆಲವರು ಹಣ್ಣಿನಿಂದ ಜ್ಯೂಸ್ ತಯಾರಿಸಿ ಸೇವಿಸುತ್ತಾರೆ. ಆದರೆ ಹಣ್ಣು ಮತ್ತು ಹಣ್ಣಿನ ರಸ ಸೇವಿಸುವುದರಲ್ಲಿ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಸಂಪೂರ್ಣ ಹಣ್ಣುಗಳನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಫೈಬರ್ ಅಂಶ ಸಿಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗೇ ಹಣ್ಣುಗಳು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತದೆ. ಹಾಗಾಗಿ ತೂಕ ಹೆಚ್ಚಳ ಸಮಸ್ಯೆ ಕಾಡುವುದಿಲ್ಲ.

ಆದರೆ ಹಣ್ಣಿನ ರಸದಲ್ಲಿ ಅನೇಕ ಹಣ್ಣುಗಳನ್ನು ಸೇರಿಸಲಾಗುತ್ತದೆ ಮತ್ತು ಇದರಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ. ಇದರಲ್ಲಿ ಸಂಪೂರ್ಣ ಹಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳಿರುವುದಿಲ್ಲ. ಸಕ್ಕರೆ ಮತ್ತು ಕ್ಯಾಲೋರಿ ಕೂಡ ಅಧಿಕವಾಗಿರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...