Kannada Duniya

ಗಣೇಶನ ಪೂಜೆ ಮಾಡುವಾಗ ಈ ತಪ್ಪನ್ನು ಮಾಡಬೇಡಿ….!

ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಹಾಗಾಗಿ ಯಾವುದೇ ಕಾರ್ಯವನ್ನು ಮಾಡುವಾಗ ವಿಘ್ನಗಳು ಬರದಂತೆ ತಡೆಯಲು ಗಣೇಶನ ಪೂಜೆಯನ್ನು ಮಾಡುತ್ತಾರೆ. ಇದರಿಂದ ಗಣೇಶನ ಅನುಗ್ರಹ ನಿಮಗೆ ದೊರೆಯುತ್ತದೆ. ಆದರೆ ಗಣೇಶನ ಪೂಜೆ ಮಾಡವಾಗ ಕೆಲವೊಂದು ತಪ್ಪುಗಳನ್ನು ಮಾಡಬೇಡಿ.

ಶಾಸ್ತ್ರಗಳ ಪ್ರಕಾರ ಗಣೇಶನ ಪೂಜೆ ಮಾಡುವಾಗ ಕಪ್ಪು ಅಥವಾ ನೀಲಿ ಬಟ್ಟೆಗಳನ್ನು ಧರಿಸಬಾರದು. ಇದರಿಂದ ಗಣೇಶ ಕೋಪಗೊಳ್ಳುತ್ತಾನೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗಣೇಶನ ನ ಪೂಜೆಯ ವೇಳೆ ಮನೆಯಲ್ಲಿ ಎರಡು ಗಣೇಶನ ಮೂರ್ತಿಯನ್ನು ಇಡಬಾರದು. ಇದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ.

ಹೋಳಿ ನಂತರ ಮೇಷದಲ್ಲಿ ಶುಕ್ರ-ರಾಹು ಸಂಯೋಗ ಆಗಲಿದ್ದು, ಈ 4 ರಾಶಿಯವರಿಗೆ ಕಷ್ಟಗಳು ಹೆಚ್ಚಾಗಲಿದೆ…..!

ಶಾಸ್ತ್ರಗಳಲ್ಲಿ ತಿಳಿಸಿದಂತೆ ಗಣೇಶನಿಗೆ ತುಳಸಿ ದಳವನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ಗಣೇಶನ ಪೂಜೆಯಲ್ಲಿ ತುಳಸಿ ದಳವನ್ನು ಅರ್ಪಿಸಬೇಡಿ.

ಹಾಗೇ ಗಣೇಶನ ವಾಹನವಾದ ಇಲಿಯನ್ನು ಹಿಂಸಿಸಬೇಡಿ ಮತ್ತು ಅದನ್ನು ಸಾಯಿಸಬೇಡಿ. ಇದರಿಂದ ಗಣೇಶ ಕೋಪಗೊಳ್ಳುತ್ತಾನೆ. ಹಾಗಾಗಿ ಇಲಿಗಳಿಗೆ ಆಹಾರ ನೀಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...