Kannada Duniya

ಕಿವಿ ಮೂಲಕ ಜೀವನದ ಬಗ್ಗೆ ತಿಳಿದುಕೊಳ್ಳಿ…!

ಕೆಲವರು ಸಣ್ಣ ಕಿವಿಯನ್ನು ಹೊಂದಿದ್ದರೆ ಇನ್ನೂ ಕೆಲವರು ದೊಡ್ಡ ಕಿವಿಯನ್ನು ಹೊಂದಿರುತ್ತಾರೆ. ಒಬ್ಬೊಬ್ಬರ ಕಿವಿ ಒಂದೊಂದು ರೀತಿಯಾಗಿ ಇರುತ್ತದೆ. ಹಾಗಾಗಿ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕಿವಿಯ ಮೂಲಕ ಆತನ ಜೀವನದ ಬಗ್ಗೆ ತಿಳಿದುಕೊಳ್ಳಬಹುದು.

-ಕೆಲವರು ದಪ್ಪ ಕಿವಿಗಳನ್ನು ಹೊಂದಿರುತ್ತಾರೆ. ಅವರು ಸಾಕಷ್ಟು ಧೈರ್ಯಶಾಲಿಗಳಾಗಿದ್ದಾರೆ. ಇವರು ರಾಜಕೀಯದಲ್ಲಿ ಉತ್ತಮ ಹೆಸರು ಗಳಿಸುತ್ತಾರೆ. ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ.

-ಸಣ್ಣ ಕಿವಿಗಳನ್ನು ಹೊಂದಿರುವವರು ಬಲಶಾಲಿಗಳಾಗಿರುತ್ತಾರೆ. ಇವರನ್ನು ಸುಲಭವಾಗಿ ನಂಬಬಹುದು. ಇವರಿಗೆ ಎಲ್ಲಾ ಕ್ಷೇತ್ರದಲ್ಲೂ ಆಸಕ್ತಿ ಇರುತ್ತದೆ.

-ಉದ್ದವಾದ ಕಿವಿಗಳನ್ನು ಹೊಂದಿರುವವರು ಬಹಳಷ್ಟು ಶ್ರಮಜೀವಿಗಳು. ಇವರು ಕುಟುಂಬ ಸದಸ್ಯರನ್ನು ಪ್ರೀತಿಸುತ್ತಾರೆ. ಇವರ ಜೀವನದಲ್ಲಿ ಸಂತೋಷ, ಸಮೃದ್ಧಿ ಇದೆ. ಇವರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಕಾಣುತ್ತಾರೆ.

ಹೋದ ಕೆಲಸ ಸಂಪೂರ್ಣವಾಗಬೇಕೆಂದರೆ ಮನೆಯಿಂದ ಹೊರಡುವಾಗ ತಪ್ಪದೇ ಈ ಕೆಲಸಗಳನ್ನು ಮಾಡಿ

-ಅಗಲವಾದ ಕಿವಿ ಇರುವವರು ಜೀವನದಲ್ಲಿ ಸಂತೋಷವಾಗಿರುತ್ತಾರೆ. ಇವರಿಗೆ ತುಂಬಾ ಅದೃಷ್ಟವಿದೆ. ಕಡಿಮೆ ಪ್ರಯತ್ನದಲ್ಲೇ ಯಶಸ್ಸು ಸಾಧಿಸುತ್ತಾರೆ. ದಾನ ಧರ್ಮದಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ.

-ಕಿವಿಗಳ ಮೇಲೆ ಕೂದಲು ಮೂಡಿದ್ದರೆ ಅಂತವರಿಗೆ ಹಣದ ಕೊರತೆಯಿಲ್ಲ ಎನ್ನಲಾಗುತ್ತದೆ. ಈ ಜನರಿಗೆ ಅದೃಷ್ಟವಿದೆ. ಕಠಿಣ ಶ್ರಮದ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನಕ್ಕೇರುತ್ತಾರೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...