Kannada Duniya

ಈ ಮರದ ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ನಿಮ್ಮಲ್ಲಿರುವ ಧನಾತ್ಮಕ ಶಕ್ತಿ ಜಾಗೃತಗೊಳ್ಳುತ್ತದೆ…!

ವಾಸ್ತುಶಾಸ್ತ್ರದಲ್ಲಿ ಧನಾತ್ಮಕ ಶಕ್ತಿಯು ಮನುಷ್ಯನನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಮನುಷ್ಯನಿಗೆ ಉತ್ತಮ ಕೆಲಸಗಳನ್ನು ಮಾಡಲು ಪ್ರೇರೇಪಿಸುತ್ತದೆ. ಹಾಗಾಗಿ ನಿಮ್ಮಲ್ಲಿ ಈ ಧನಾತ್ಮಕ ಶಕ್ತಿ ಜಾಗೃತಗೊಳ್ಳಲು ಈ ಮರದ ನೆರಳಿನಲ್ಲಿ ಕುಳಿತುಕೊಳ್ಳಿ.

ಬಾಳೆಮರ : ಈ ಮರ ವಿದ್ಯಾರ್ಥಿಗಳಿಗೆ ಮಂಗಳಕರವಾಗಿದೆ. ವಾಸ್ತು ಪ್ರಕಾರ ವಿದ್ಯಾರ್ಥಿಗಳು ಬಾಳೆಮರದ ಕೆಳಗೆ ಕುಳಿತು ಓದಿದರೆ ಅವರು ಓದಿದ ವಿಷಯ ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ವಿದ್ಯಾರ್ಥಿಯ ನೆನಪಿನ ಶಕ್ತಿ ಹೆಚ್ಚಾಗುತ್ತದೆ.

ಬೇವಿನ ಮರ : ಬೇವಿನ ಮರವನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿ ಜಾಗೃತವಾಗುತ್ತದೆ. ಇದರಲ್ಲಿ ದುರ್ಗಾದೇವಿ ವಾಸಿಸುತ್ತಾಳೆ ಎಂಬ ನಂಬಿಕೆ ಇದೆ. ಈ ಮರದ ನೆರಳಿನಲ್ಲಿ ಕುಳಿತರೆ ದೇವಿಯ ಆಶೀರ್ವಾದದಿಂದ ಅವರಲ್ಲಿ ಧನಾತ್ಮಕ ಶಕ್ತಿ ಜಾಗೃತಗೊಳ್ಳುತ್ತದೆ.

ಪಪ್ಪಾಯ ಆರೋಗ್ಯಕ್ಕೆ ತುಂಬಾ ಉತ್ತಮ, ಆದರೆ ಅದನ್ನು ಸೇವಿಸುವ ಸರಿಯಾದ ವಿಧಾನ ತಿಳಿದುಕೊಳ್ಳಿ….!

ಅರಳೀಮರ : ಈ ಮರದ ನೆರಳಿನಲ್ಲಿ ಕುಳಿತುಕೊಳ್ಳುವುದರಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಮಧ್ಯಾಹ್ನದ ಮೇಲೆ ಈ ಮರದ ಕೆಳಗೆ ಕುಳಿತುಕೊಳ್ಳಬೇಡಿ. ಇದರಿಂದ ವ್ಯಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ನೆಲ್ಲಿಕಾಯಿ ಮರ : ಈ ಮರದ ಕೆಳಗೆ ಕುಳಿತುಕೊಳ್ಳುವುದರಿಂದ ವಿಷ್ಣುವಿನ ಅನುಗ್ರಹ ದೊರೆಯುತ್ತದೆ. ಹಾಗೇ ಗಣೇಶನ ಅನುಗ್ರಹವೂ ದೊರೆಯುತ್ತದೆ. ಇದರಿಂದ ಜೀವನದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...