Kannada Duniya

ಈ ಬಟ್ಟೆಗಳನ್ನು ಧರಿಸಿದರೆ ನಿಮಗೆ ದುರಾದೃಷ್ಟ ಆವರಿಸುತ್ತದೆಯಂತೆ…!

ವಾಸ್ತು ಶಾಸ್ತ್ರದಲ್ಲಿ ನಾವು ತೊಟ್ಟುಕೊಳ್ಳುವಂತಹ ಬಟ್ಟೆಗಳು ಮಾತ್ರವಲ್ಲ ಅದರ ಬಣ್ಣ ಕೂಡ ನಮ್ಮ ಅದೃಷ್ಟ ಮತ್ತು ದುರಾದೃಷ್ಟಕ್ಕೆ ಕಾರಣವಾಗಿದೆ. ಹಾಗಾಗಿ ನಾವು ಬಟ್ಟೆ ಧರಿಸುವಾಗ ಮಾಡುವಂತಹ ಸಣ್ಣ ತಪ್ಪುಗಳು ದೊಡ್ಡ ತೊಂದರೆಗಳಿಗೆ ಕಾರಣವಾಗಬಹುದು. ಹಾಗಾಗಿ ಬಟ್ಟೆ ಧರಿಸುವಾಗ ಈ ಸಲಹೆಯನ್ನು ಪಾಲಿಸಿ.

ಹರಿದ ಬಟ್ಟೆಗಳನ್ನು ಹಾಗೂ ಕೊಳಕು ಬಟ್ಟೆಗಳನ್ನು ಎಂದಿಗೂ ಬಳಸಬೇಡಿ. ಮತ್ತು ಹರಿದ ಬೆಡ್ ಶೀಟ್, ಪರದೆಗಳನ್ನು ಮನೆಯಲ್ಲಿ ಹಾಕಬೇಡಿ. ಇದರಿಂದ ನಕರಾತ್ಮಕತೆ ಮನೆಯನ್ನು ಆವರಿಸುತ್ತದೆ.

ಮದುವೆಯ ವಯಸ್ಸಿಗೆ ಬಂದವರು ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಇದರಿಂದ ಮದುವೆ ವಿಳಂಬವಾಗುತ್ತದೆ. ಹಾಗಾಗಿ ಅಂತವರು ಗುಲಾಬಿ, ಕಿತ್ತಳೆ, ತಿಳಿ ಬಣ್ಣ ದ ಬಟ್ಟೆಗಳನ್ನು ಧರಿಸಿ.
ಆತ್ಮವಿಶ್ವಾಸದ ಕೊರತೆಯಿರುವವರು ಕೆಂಪು ಬಟ್ಟೆಗಳನ್ನು ಧರಿಸಿದರೆ ಉತ್ತಮ. ಇದರಿಂದ ಅನೇಕ ಪ್ರಯೋಜನವನ್ನು ಪಡೆಯಬಹುದು.

ಈ ಕೆಲಸ ಹಳದಿ ಸಾಸಿವೆಯಿಂದ ಮಾಡಿದರೆ ನೀವು ಶ್ರೀಮಂತರಾಗುತ್ತೀರಿ….!

ಬುಧವಾರ, ಗುರುವಾರ ಮತ್ತು ಶುಕ್ರವಾರದಂದು ಹೊಸ ಬಟ್ಟೆಗಳನ್ನು ಧರಿಸಿ, ಇದರಿಂದ ಶುಭ ಫಲಿತಾಂಶ ಸಿಗುತ್ತದೆ.ಶನಿವಾರ ಬಟ್ಟೆ ಖರೀದಿಸಬೇಡಿ. ಆ ಬಟ್ಟೆಗಳು ಬೇಗನೆ ಹರಿದುಹೋಗುತ್ತವೆ.

ಜೀವನದಲ್ಲಿ ಪದೇ ಪದೆ ನಿರಾಸೆಗೊಳಗಾಗುವವರು ಹಳದಿ ಬಟ್ಟೆಗಳನ್ನು ಧರಿಸಿದರೆ ಅವರಿಗೆ ಉತ್ತಮ ಫಲಿತಾಂಶಗಳಿ ಸಿಗುತ್ತದೆ. ಜೀವನದಲ್ಲಿ ಸ್ಫೂರ್ತಿಯನ್ನು ಹೊಂದುತ್ತಾರೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...