Kannada Duniya

ಈ ತಪ್ಪನ್ನು ಮಾಡಬೇಡಿ ಅರಳೀಮರವನ್ನು ಪೂಜಿಸುವಾಗ…!

ಸನಾತನ ಕಾಲದಿಂದಲೂ ದೇವರ ಜೊತೆಗೆ ಪ್ರಕೃತಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕಾಗಿಯೇ ಹಿಂದೂಧರ್ಮದವರು ಸೂರ್ಯ, ಹಸು, ಚಂದ್ರ, ಮರಗಿಡಗಳನ್ನು ಪೂಜಿಸುತ್ತಾರೆ. ಮತ್ತು ಇವುಗಳಿಗೆ ಸಂಬಂಧಿಸಿದ ಹಬ್ಬಗಳನ್ನು ಆಚರಿಸುತ್ತಾರೆ. ಹಾಗೇ ಜಾತಕದಲ್ಲಿರುವ ದೋಷಗಳನ್ನು ಕಳೆಯಲು ಅರಳೀಮರವನ್ನು ಪೂಜಿಸಲಾಗುತ್ತದೆ. ಆದರೆ ಪೂಜೆಯ ವೇಳೆ ಈ ತಪ್ಪುಗಳನ್ನು ಮಾಡಬೇಡಿ.

ಅರಳೀಮರದಲ್ಲಿ ತ್ರಿಮೂರ್ತಿಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಇದನ್ನು ಪೂಜಿಸುವುದರಿಂದ ಜೀವನದಲ್ಲಿ ಎದುರಾದ ಸಂಕಷ್ಟಗಳು ಕಳೆಯುತ್ತದೆಯಂತೆ. ಅಲ್ಲದೇ ಅರಳೀಮರದಲ್ಲಿ ಶನಿವಾರ ಲಕ್ಷ್ಮಿದೇವಿ ನೆಲೆಸುತ್ತಾಳಂತೆ . ಹಾಗಾಗಿ ಶನಿವಾರದಂದು ಅರಳೀಮರಕ್ಕೆ ನೀರು ಅರ್ಪಿಸುವುದರಿಂದ ಜೀವನದಲ್ಲಿ ಸುಖ, ಸಂಪತ್ತು, ವೈಭವ ನೆಲೆಸಿರುತ್ತದೆಯಂತೆ.

ಶನಿವಾರದಂದು ಈ ಕೆಲಸ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ…!

ಆದರೆ ಭಾನುವಾರದಂದು ಅರಳೀಮರಕ್ಕೆ ನೀರನ್ನು ಅರ್ಪಿಸಬಾರದಂತೆ. ಇದರಿಂದ ಆರ್ಥಿಕ ನಷ್ಟವಾಗಲಿದೆಯಂತೆ. ಅಲ್ಲದೇ ಅರಳೀಮರವನ್ನು ಕತ್ತರಿಸಬಾರದಂತೆ. ಇದರಿಂದ ದಾರಿದ್ರ್ಯ ಆವರಿಸುತ್ತದೆಯಂತೆ. ಹಾಗೇ ಅರಳೀಮರವನ್ನು ನೆಡುವುದರಿಂದ ನಿಮ್ಮ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ನಿಜ. ಆದರೆ ಅದನ್ನು ಮನೆಯ ಬಳಿ ನೆಡಬಾರದು. ಅದನ್ನು ದೇವಸ್ಥಾನದಲ್ಲಿ, ರಸ್ತೆ ಬದಿ, ಉದ್ಯಾನವನದಲ್ಲಿ ನೆಟ್ಟರೆ ಉತ್ತಮವಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...