Kannada Duniya

ನಕಲಿ ಚಹಾದ ಎಲೆಗಳನ್ನು ಹೀಗೆ ಪತ್ತೆ ಮಾಡಿ….!

ಹೆಚ್ಚಿನ ಜನರು ಬೆಳಿಗ್ಗೆ ಚಹಾ ಕುಡಿಯಲು ಇಷ್ಟಪಡುತ್ತಾರೆ. ಹಾಗಾಗಿ ಚಹಾ ಎಲೆಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಅದರಲ್ಲಿ ಕಲಬೆರೆಕೆ ಹೆಚ್ಚಾಗುತ್ತಿದೆ. ಇದನ್ನು ಸೇವಿಸಿದರೆ ನಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಚಹಾದ ಎಲೆಗಳು ನಕಲಿಯಾಗಿದ್ದರೆ ಅದನ್ನು ಹೀಗೆ ಕಂಡುಹಿಡಿಯಿರಿ.

ಚಹಾ ಎಲೆಗಳ ಕಲಬೆರೆಕೆಯನ್ನು ಹಲವು ವಿಧಗಳಲ್ಲಿ ಮಾಡಲಾಗುತ್ತದೆ. ಇದರಲ್ಲಿ ಹಳೆಯ ಮತ್ತು ಬಳಸಿದ ಚಹಾದ ಎಲೆಗಳನ್ನು ಮತ್ತೆ ಒಣಗಿಸಿ ಪ್ಯಾಕ್ ಮಾಡಿ ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಅನೇಕ ರೋಗಗಳು ಉಂಟಾಗುತ್ತದೆ. ಹಾಗಾಗಿ ಅದನ್ನು ಪತ್ತೆ ಹಚ್ಚುವುದು ಅನಿವಾರ್ಯ.

ಅದಕ್ಕಾಗಿ ಫಿಲ್ಟರ್ ಪೇಪರ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಚಹಾ ಎಲೆಗಳನ್ನು ಇರಿಸಿ. ಅದರ ಮೇಲೆ ಕೆಲವು ಹನಿ ನೀರನ್ನು ಹಾಕಿ ಅದನ್ನು ತೇವಗೊಳಿಸಿ. ಬಳಿಕ ಫಿಲ್ಟರ್ ಪೇಪರ್ ಅನ್ನು ಟ್ಯಾಪ್ ನೀರಿನಲ್ಲಿ ತೊಳೆಯಿರಿ. ಈಗ ಬೆಳಕಿನಲ್ಲಿ ಹಿಡಿದಾಗ ಫಿಲ್ಟರ್ ಪೇಪರ್ ನಲ್ಲಿ

ಮಧುಮೇಹ ನಿಯಂತ್ರಿಸಲು ಪುದೀನಾ ರಸ ಸೇವಿಸಬಹುದೇ?

ಯಾವುದೇ ಕಲೆ ಇಲ್ಲದಿದ್ದರೆ ಅದು ನಿಜವಾದ ಚಹಾದ ಎಲೆಗಳು . ಒಂದು ವೇಳೆ ಫಿಲ್ಟರ್ ಪೇಪರ್ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಂಡರೆ ಅದು ನಕಲಿ ಚಹಾದ ಎಲೆಗಳು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...