Kannada Duniya

ವಧುವಿನ ಮೇಕಪ್ ಅನ್ನು ಪಾರ್ಲರ್ ನಲ್ಲಿ ಮಾಡುತ್ತಿದ್ದೀರಾ? ಹಾಗಾದ್ರೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಈ ಸಲಹೆ ಪಾಲಿಸಿ

ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಈ ವೇಳೆ ಮದುವೆಗಳು ನಡೆಯುತ್ತಿವೆ. ಹಾಗಾಗಿ ಮೇಕಪ್ ಮಾಡಿಕೊಳ್ಳಲು ಕೆಲವು ಹೆಣ್ಣುಮಕ್ಕಳು ಪಾರ್ಲರ್ ಗೆ ಹೋಗುತ್ತಾರೆ. ಆ ವೇಳೆ ಸೋಂಕಿನಿಂದ ತಪ್ಪಿಸಿಕೊಳ್ಳಲು ಈ ಸಲಹೆಯನ್ನು ಪಾಲಿಸಿ.

*ಕೊರೊನಾದ ಈ ಸಮಯದಲ್ಲಿ ಬೇರೊಬ್ಬರಿಗೆ ಬಳಸಿದ ಮೇಕಪ್ ಸ್ಪಂಜ್ ಅನ್ನು ಬಳಸುವುದರಿಂದ ಚರ್ಮದ ಸೋಂಕು ಉಂಟಾಗಬಹುದು. ಹಾಗಾಗಿ ಮೇಕಪ್ ಸ್ಪಂಜ್ ಅನ್ನು ಬದಲಾಯಿಸಿ.

ಕೊರೊನಾದಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಸಲಹೆಗಳನ್ನು ಪಾಲಿಸಿ

*ಬೇರೆಯವರಿಗೆ ಬಳಸಿದ ಮೇಕಪ್ ಬ್ರಶ್ ನಿಂದ ಕೂಡ ಸೋಂಕು ಹರಡುವುದರಿಂದ ಮೇಕಪ್ ಬ್ರಶ್ ಅನ್ನು ಕೂಡ ಬದಲಾಯಿಸಿ.
*ಕಾಜಲ್ ಮತ್ತು ಮಸ್ಕರಾ ವನ್ನು ಹೊಸದನ್ನೇ ಬಳಸಿ. ಯಾಕೆಂದರೆ ಕಣ್ಣುಗಳ ರೆಪ್ಪೆಯಲ್ಲಿರುವ ಬ್ಯಾಕ್ಟೀರಿಯಾ ಬ್ರಶ್ ಗಳ ಮೂಲಕ ಕಾಜಲ್ ಮತ್ತು ಮಸ್ಕರಾದಲ್ಲಿ ಸೇರಿಕೊಂಡಿರುತ್ತದೆ. ಇದನ್ನು ನಿಮಗೆ ಬಳಸುವುದರಿಂದ ನಿಮಗೆ ಕಣ್ಣಿನ ಸೋಂಕು ತಗುಲುವ ಸಂಭವವಿರುತ್ತದೆ.

*ಹೇರ್ ಬ್ರಶ್ ಅನ್ನು ಕೂಡ ಬದಲಾಯಿಸಿ. ಯಾಕೆಂದರೆ ನೆತ್ತಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೇರ್ ಬ್ರಶ್ ಮೂಲಕ ನಿಮಗೆ ತಗುಲುವ ಸಂಭವವಿರುತ್ತದೆ.

*ಲಿಪ್ ಸ್ಟಿಕ್ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಲಿಪ್ ಸ್ಟಿಕ್ ತುಟಿಗೆ ಹಚ್ಚುವುದರಿಂದ ಸೋಂಕು ಹರಡುವ ಸಂಭವವಿರುತ್ತದೆ. ಹಾಗಾಗಿ ಯಾವುದೇ ಮೇಕಪ್ ವಸ್ತುಗಳನ್ನು ನೀವೇ ಹೊಸದನ್ನು ತೆಗೆದುಕೊಂಡು ಬಳಸಿದರೆ ಉತ್ತಮ.

Marriages have to go on even in a pandemic. If you are a bride ,take these precautions before going to a parlour for Bridal makeup.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...