Kannada Duniya

ಪ್ರತಿ ದಿನ ಕಾಜಲ್ ಉಪಯೋಗಿಸುತ್ತಿದ್ದೀರಾ…?

ನಿತ್ಯ ಕಣ್ಣಿಗೆ ಕಾಜಲ್ ಹಚ್ಚುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬ ಹೆಣ್ಣು ಮಕ್ಕಳು ಇಷ್ಟಪಡುವ ಅಲಂಕಾರಿಕ ವಸ್ತುಗಳಲ್ಲಿ ಇದು ಒಂದು. ಆದರೆ ನಿತ್ಯ ಇದನ್ನು ಹಚ್ಚುವುದರಿಂದ ಕಣ್ಣುಗಳ ಸುತ್ತಲಿನ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನಲಾಗಿದೆ.
ದೇಹದ ಇತರ ಭಾಗಗಳಿಗೆ ಹೋಲಿಸಿದರೆ ಕಣ್ಣುಗಳ ಸುತ್ತಲಿನ ತ್ವಚೆ ಹೆಚ್ಚು ಸೂಕ್ಷ್ಮ ಹಾಗೂ ಮೃದು. ಹಾಗಾಗಿ ನಿತ್ಯ ನೀವು ಕಾಜಲ್ ಹಚ್ಚಿದರೂ ರಾತ್ರಿ ಮಲಗುವ ಮುನ್ನ ಅದನ್ನು ತೆಗೆಯಲು ಮರೆಯದಿರಿ.
ಸಾಮಾನ್ಯವಾಗಿ ಆಧುನಿಕ ಕಾಜಲ್ ತಯಾರಿಯಲ್ಲಿ ಸತು, ಕಬ್ಬಿಣ ಹಾಗೂ ಸೀಸದ ಆಕ್ಸೈಡ್ ನಂತಹ ಅಂಶಗಳನ್ನು ಬಳಸಲಾಗುತ್ತದೆ. ಇವುಗಳನ್ನು ಸ್ವಚ್ಛಗೊಳಿಸಬೇಕು ಆ ಭಾಗ ಕ್ರಮೇಣ ಕಪ್ಪಾಗಬಹುದು.
ಮೇಕಪ್ ತೆಗೆಯಲು ಹೇಗೆ ಕ್ಲೆನ್ಸಿಂಗ್ ಮಿಲ್ಕ್ ಅನ್ನು ಬಳಸುತ್ತಿರೋ ಅದೇ ರೀತಿ ಕಣ್ಣು ಸುತ್ತಲಿನ ಕಾಜಲ್ ಅನ್ನು ತೆಗೆಯಲು ಕ್ಲೆನ್ಸಿಂಗ್ ಮಿಲ್ಕ್ ಸಹಾಯ ಪಡೆದುಕೊಳ್ಳಿ.
ಪೆಟ್ರೋಲಿನ್ ಜೆಲ್ಲಿಯಿಂದಲು ನಿಮ್ಮ ಮುಖದ ಕಾಜಲ್ ಅನ್ನು ತೆಗೆದು ಹಾಕಬಹುದು. ಬೆರಳ ತುದಿಯಲ್ಲಿ ಅದನ್ನು ತೆಗೆದುಕೊಂಡು ಕಾಜಲ್ ಹಚ್ಚಿರುವ ಜಾಗಕ್ಕೆ ನಿಧಾನವಾಗಿ ಉಜ್ಜಿ.
ಅದೇ ರೀತಿ ಕಾಜಲ್ ತೆಗೆಯಲು ರೋಸ್ ವಾಟರ್ ಕೂಡ ನೆರವಾಗುತ್ತದೆ. ಇದು ಚರ್ಮಕ್ಕೆ ಹೊಳಪು ನೀಡುವ ಜೊತೆಗೆ ಕಾಜಲ್ ನ ಸೂಕ್ಷ್ಮ ಕಣಗಳನ್ನು ತ್ವಚೆಯಿಂದ ದೂರ ಮಾಡುತ್ತದೆ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...