Kannada Duniya

ದೇಹದ ಉಷ್ಣತೆ ಕಡಿಮೆ ಮಾಡಲು ಇಲ್ಲಿದೆ ನೋಡಿ ಸೂಪರ್ ಟಿಪ್ಸ್…!

ಸೆಕೆ ವಿಪರೀತವಿದೆ. ಎಷ್ಟು ನೀರು ಕುಡಿದರೂ ದಾಹ ಕಡಿಮೆಯಾಗುತ್ತಿಲ್ಲ. ಮುಖದಲ್ಲಿ, ದೇಹದ ಕೆಲವು ಭಾಗದಲ್ಲಿ ಸೆಕೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತಿವೆ ಅಂದುಕೊಳ್ಳುತ್ತಿದ್ದೀರಾ….?.ಇವೆಲ್ಲಾ ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ಮತ್ತಷ್ಟೂ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಹೈಪೋಥೈರಾಯಿಡ್, ಜ್ವರ ಇದ್ದಾಗಲೂ ನಮ್ಮ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ನಾನಾ ರೋಗಕ್ಕೆ ಎಡೆ ಮಾಡಿಕೊಳ್ಳುತ್ತದೆ. ಇನ್ನು ಅತೀಯಾದ ಮಸಾಲೆ ಪದಾರ್ಥಗಳನ್ನು ಸೇವಿಸುವುದು, ಕರಿದ ಪದಾರ್ಥಗಳ ಸೇವನೆ, ಕೆಲವೊಂದು ನಟ್ಸ್, ಮಾಂಸಾಹಾರಗಳು ಕೂಡ ದೇಹದಲ್ಲಿ ಉಷ್ಣತೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ಇದರ ಜತೆಗೆ ಬಿಗಿಯಾದ ಉಡುಪು, ಸಿಂಥೆಟಿಕ್ ಡ್ರೆಸ್ ಈ ತರಹದ ದಿರಿಸುಗಳಿಂದಲೂ ಕೂಡ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಒಂದು ರೀತಿ ಒತ್ತಡ ಕಾಣಿಸಿಕೊಳ್ಳುತ್ತದೆ. ಇದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ.

ಬೇಸಿಗೆಯಲ್ಲಿ ಮೊಸರಿಗೆ ಆದ್ಯತೆ ನೀಡಬೇಕು ಏಕೆ ಗೊತ್ತಾ…?

ಕೋಲ್ಡ್ ಫೂಟ್ ಬಾತ್: ಹಿಮ್ಮಡಿ ಬಿರುಕು, ಕಾಲು ಸೆಳೆತ ಉಂಟಾದಾಗ ನಾವು ಉಗುರು ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುತ್ತೇವೆ. ಹಾಗೇ ದೇಹದಲ್ಲಿ ಉಷ್ಣತೆ ಹೆಚ್ಚಿದಾಗ ತಣ್ಣಗಿನ ನೀರಿನಲ್ಲಿ ಕಾಲನ್ನು ಇಡುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಬಕೆಟ್ ನಲ್ಲಿ ನೀರು ತುಂಬಿಸಿಕೊಂಡು ಅದಕ್ಕೆ ಒಂದಷ್ಟು ಐಸ್ ಕ್ಯೂಬ್ ಹಾಕಿ ಅದಕ್ಕೆ ಪೆಪ್ಪರ್ ಮಿಂಟ್ ಎಸೆನ್ಸಿಯಲ್ ಆಯಿಲ್ ಅನ್ನು 2 ಹನಿ ಹಾಕಿ ನಿಮ್ಮ ಪಾದವನ್ನು 20 ನಿಮಿಷಗಳ ಕಾಲ ನೆನೆಸಿಟ್ಟುಕೊಳ್ಳಿ. ಇದು ಉಷ್ಣತೆಯನ್ನು ಕಡಿಮೆ ಮಾಡುತ್ತದೆ.

ಎಳನೀರು: ಇನ್ನು ಎಳನೀರನ್ನು ಕುಡಿಯುವುದರಿಂದ ಕೂಡ ದೇಹದ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್, ಮಿನರಲ್ಸ್, ಎಲೆಕ್ಟ್ರೋಲೈಟ್ಸ್ ದಾಹವನ್ನು ಕಡಿಮೆ ಮಾಡುತ್ತದೆ.

ಅಲೋವೆರಾ: ಅಲೋವೆರಾ ಕೂಡ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿದೆ. ಇದರ ಜೆಲ್ ಅನ್ನು ಮುಖಕ್ಕೆ ಹಚ್ಚುವುದರಿಂದ ಕೂಡ ಸೆಕೆ ಬೊಕ್ಕೆಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಹಾಗೇ ನೀರಿನಲ್ಲಿ ಇದರ ತಾಜಾ ಲೋಳೆಯನ್ನು ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ಕೂಡ ದೇಹದ ಉಷ್ಣತೆ ಕಡಿಮೆ ಆಗುತ್ತದೆ.

This Article gives idea how to control body temperature using the  Home remedies


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...