Kannada Duniya

ಈ ಸಮಸ್ಯೆ ಇರುವವರು ಬೇರೆಯವರಿಗೆ ಕಿಸ್ ಮಾಡಬೇಡಿ

ನಾವು ಚಿಕ್ಕ ಮಗುವನ್ನು ಕಂಡಾಗ ಅಥವಾ ಪ್ರೇಮಿಗಳು, ದಂಪತಿಗಳು ಹೀಗೆ ನಮಗೆ ಪ್ರೀತಿ ಪಾತ್ರರಿಗೆ ನಾವು ಕಿಸ್ ನೀಡುವ ಮೂಲಕ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತೇವೆ. ಆದರೆ ಕೆಲವರಲ್ಲಿ ಆರೋಗ್ಯ ಸಮಸ್ಯೆಗಳು ಇರುತ್ತದೆ. ಅಂತವರು ಕಿಸ್ ನೀಡುವುದು ತಪ್ಪಿಸಿ. ಇಲ್ಲವಾದರೆ ನಿಮ್ಮ ಪ್ರೀತಿಪಾತ್ರರಿಗೆ ಸಮಸ್ಯೆಯಾಗಬಹುದು.

ಕಿಸ್ ಮಾಡುವುದರಿಂದ ಎಸ್ ಟಿಐ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆಯಂತೆ. ಈ ಸೋಂಕಿನಿಂದ ದೇಹದಲ್ಲಿ ನೋವು, ಗಂಟಲು ನೋವು, ಆಯಾಸ ಮತ್ತು ದುರ್ಬಲತೆ ಸಮಸ್ಯೆ ಕಾಡುತ್ತದೆಯಂತೆ.

ಅಲ್ಲದೇ ಕಿಸ್ ಮಾಡುವುದರಿಂದ ಉಸಿರಾಟದ ಸಮಸ್ಯೆಗಳು ಕಾಡುತ್ತದೆಯಂತೆ. ಹಾಗಾಗಿ ಶೀತ, ಕಫ, ಮತ್ತು ಅಸ್ತಮಾದಿಂದ ನರಳುತ್ತಿರುವವರು ಕಿಸ್ ನೀಡಬೇಡಿ.

ಹಾಗೇ ಹರ್ಪಿಸ್ ಎಂಬ ರೋಗ ಕಿಸ್ ಮಾಡುವುದರಿಂದ ಹರಡುತ್ತದೆಯಂತೆ. ಒಬ್ಬ ವ್ಯಕ್ತಿ ಈ ಸೋಂಕನ್ನು ಹೊಂದಿದ್ದರೆ ಆತ ಕಿಸ್ ಮಾಡುವ ಮೂಲಕ ಇದು ಬೇರೆಯವರಿಗೆ ಹರಡುತ್ತದೆ. ಇದರಿಂದ ಬಾಯಲ್ಲಿ ಕೆಂಪು ಅಥವಾ ಬಿಳಿ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...