Kannada Duniya

ನಿದ್ರಾಹೀನತೆ ಸಮಸ್ಯೆಗೆ ಈ ವಿಟಮಿನ್ ಕೊರತೆಯೇ ಕಾರಣವಂತೆ

ಸಾಕಷ್ಟು ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ದಿನಕ್ಕೆ 7-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಆದರೆ ಕೆಲವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಮ್ಮ ದೇಹದಲ್ಲಿ ಈ ವಿಟಮಿನ್ ಕೊರತೆಯೇ ಕಾರಣವಂತೆ.

ನಿದ್ರೆ ಮತ್ತು ಮೆದುಳಿನ ನಡುವೆ ಆಳವಾದ ಸಂಬಂಧವಿದೆ. ಕೆಲವು ಮಾನಸಿಕ ಸಮಸ್ಯೆಗಳು ನಿದ್ರಾಹೀನತೆ ಸಮಸ್ಯೆಗೆ ಕಾರಣವಾಗುತ್ತದೆ. ಅಲ್ಲದೇ ನಿದ್ರೆಗೆ ಕೆಲವು ವಿಟಮಿನ್ ಗಳು ಅಗತ್ತವಾಗಿ ಬೇಕು. ವಿಟಮಿನ್ ಸಿ, ಡಿ, ಕೆ ಮತ್ತು ಬಿ ಇವು ಮೆದುಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

ಹಾಗಾಗಿ ನೀವು ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ಪಡೆಯಲು ವಿಟಮಿನ್ ಸಿ, ಡಿ, ಕೆ ಮತ್ತು ಬಿ ಸಮೃದ್ಧವಾಗಿರುವಂತಹ ಹಾಲು, ಮೊಟ್ಟೆ, ಅಣಬೆ, ಕಿತ್ತಳೆರಸವನ್ನು ಸೇವಿಸಿ. ಇವುಗಳನ್ನು ಪ್ರತಿದಿನ ಸೇವಿಸಿದರೆ ನಿದ್ರಾಹೀನತೆ ಸಮಸ್ಯೆ ಕಾಡುವುದಿಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...