Kannada Duniya

ಕಬ್ಬಿಣಾಂಶದ ಮಾತ್ರೆಗಳನ್ನು ಹಾಲಿನೊಂದಿಗೆ ಸೇವಿಸಬಹುದೇ?

ಕಬ್ಬಿಣಾಂಶ ದೇಹದಲ್ಲಿ ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಆದರೆ ಕೆಲವರಲ್ಲಿ ಕಬ್ಬಿಣಾಂಶದ ಕೊರತೆಯಾದರೆ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಹಾಗಾಗಿ ವೈದ್ಯರು ಕಬ್ಬಿಣಾಂಶದ ಮಾತ್ರೆಗಳನ್ನು ನೀಡುತ್ತಾರೆ. ಆದರೆ ಕೆಲವರು ಅದನ್ನು ಹಾಲಿನ ಜೊತೆ ಸೇವಿಸುತ್ತಾರೆ. ಇದು ಸರಿಯೇ?

ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸುವವರಿಗೆ ವೈದ್ಯರು ಹಾಲನ್ನು ಕುಡಿಯಲು ಹೇಳುತ್ತಾರೆ. ಆದರೆ ಕೆಲವರು ಹಾಲಿನೊಂದಿಗೆ ಮಾತ್ರೆಗಳನ್ನು ಸೇವಿಸುತ್ತಾರೆ. ಹೀಗೆ ಮಾಡಬಾರದಂತೆ. ಇದರಿಂದ ದೇಹಕ್ಕೆ ಯಾವುದೇ ಅಪಾಯವಾಗುವುದಿಲ್ಲ. ಆದರೆ ಕಬ್ಬಿಣಾಂಶವನ್ನು ದೇಹಕ್ಕೆ ಹೀರಿಕೊಳ್ಳಲು ಕಷ್ಟವಾಗುತ್ತದೆಯಂತೆ.

ಹಾಗಾಗಿ ಕಬ್ಬಿಣಾಂಶದ ಮಾತ್ರೆಗಳನ್ನು ಯಾವಾಗಲೂ ನೀರು ಮತ್ತು ವಿಟಮಿನ್ ಸಿ ಸಮೃದ್ಧವಾಗಿರುವ ಜ್ಯೂಸ್ ನ ಜೊತೆಗೆ ಸೇವಿಸಿ. ಹಾಗೇ ನೀವು ಕಿತ್ತಳೆ ರಸದೊಂದಿಗೆ ಈ ಮಾತ್ರೆಗಳನ್ನು ಸೇವಿಸಿದರೆ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು. ಮತ್ತು ಮಾತ್ರೆ ಸೇವಿಸಿದ 2 ಗಂಟೆಗಳ ನಂತರ ಹಾಲನ್ನು ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...