Kannada Duniya

ವ್ಯಾಯಾಮವಿಲ್ಲದೇ ತೂಕವನ್ನು ಕಳೆದುಕೊಳ್ಳಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಸೇವಿಸಿ

ತೂಕ ಹೆಚ್ಚಳ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಕಾಡುವಂತಹ ಸಮಸ್ಯೆಯಾಗಿದೆ. ಅದಕ್ಕಾಗಿ ಜನರು ತೂಕವನ್ನು ಇಳಿಸಿಕೊಳ್ಳಲು ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ವ್ಯಾಯಾಮ ಮಾಡಲು ಇಷ್ಟವಿಲ್ಲದವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ರಸವನ್ನು ಕುಡಿಯಿರಿ.

ಸೆಲರಿ ಜ್ಯೂಸ್ ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಜೀವಸತ್ವಗಳು, ಖನಿಜಗಳು, ಆ್ಯಂಟಿ ಆಕ್ಸಿಡೆಂಟ್ ಗಳು ಸೇರಿದಂತೆ ಅನೇಕ ಪೋಷಕಾಂಶಗಳು ಕಂಡುಬರುತ್ತದೆ. ಇದು ದೇಹವನ್ನು ನಿರ್ವಿಷಗೊಳಿಸುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ದೇಹದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬು ಸುಡುತ್ತದೆ.

ಅಲ್ಲದೇ ಸೆಲರಿಯಲ್ಲಿ ನಾರಿನಾಂಶ ಹೆಚ್ಚಾಗಿದ್ದು, ಇದು ಹೊಟ್ಟೆಯನ್ನು ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ. ಹಾಗಾಗಿ ಇದನ್ನು ಸೆಲರಿ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ ಅದಕ್ಕೆ ನಿಂಬೆರಸ ಮತ್ತು ಜೇನುತುಪ್ಪವನ್ನು ಸೇರಿಸಿ ರುಬ್ಬಿ ಜ್ಯೂಸ್ ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...