Kannada Duniya

ವಿಟಮಿನ್ ಡಿ ಅತಿಯಾಗಿ ಸೇವಿಸಿದರೆ ಈ ಸಮಸ್ಯೆ ಕಾಡುತ್ತದೆಯಂತೆ….!

ದೇಹದ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಲು ವಿಟಮಿನ್ ಗಳು ಅತ್ಯಗತ್ಯ. ವಿಟಮಿನ್ ಡಿ ಕೊರೆತಯಿಂದ ಹಲವಾರು ಸಮಸ್ಯೆಗಳು ಕಾಡುತ್ತದೆ. ಇದು ಮೂಳೆಗಳನ್ನು ಗಟ್ಟಿಗೊಳಿಸಲು ಸಹಾಯ ಮಾಡುತ್ತದೆ. ಆದರೆ ವಿಟಮಿನ್ ಡಿ ಅತಿಯಾಗಿ ಸೇವಿಸಿದರೆ ಈ ಸಮಸ್ಯೆ ಕಾಡುತ್ತದೆಯಂತೆ.

ವಿಟಮಿನ್ ಡಿ ಅತಿಯಾದ ಸೇವನೆಯಿಂದ ರಕ್ತದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆಯಂತೆ. ಇದರಿಂದ ವಾಂತಿ, ವಾಕರಿಕೆ, ಆಗಾಗ ಮೂತ್ರವಿಸರ್ಜನೆ ಸಮಸ್ಯೆ ಕಾಡುತ್ತದೆ.

ವಿಟಮಿನ್ ಡಿ ಅತಿಯಾಗಿ ಸೇವಿಸುವುದರಿಂದ ಹಸಿವಿನ ಕೊರತೆ ಕಾಡುತ್ತದೆಯಂತೆ. ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆಯಂತೆ.

ವಿಟಮಿನ್ ಡಿ ಅತಿಯಾದ ಸೇವನೆಯಿಂದ ಕಿಡ್ನಿಗೆ ಹಾನಿಯಾಗುತ್ತದೆಯಂತೆ. ಇದು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಉಂಟುಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...