Kannada Duniya

 ವಾಕಿಂಗ್ ಅಥವಾ ಯೋಗ  ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು?

ವಾಕಿಂಗ್ ಅಥವಾ ಯೋಗ ಇದರಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರು ಒಂದಿಲ್ಲೊಂದು ಸಂದರ್ಭದಲ್ಲಿ ಕೇಳಿಯೇ ಇರುತ್ತಾರೆ. ದೇಹದ ತೂಕ ಕಳೆದುಕೊಳ್ಳುವ ಪ್ರಯತ್ನದಲ್ಲಿ ಇವೆರಡು ಮಹತ್ವದ ಪಾತ್ರ ವಹಿಸುತ್ತವೆ. ಆರೋಗ್ಯ ವೃದ್ಧಿಗೂ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತದೆ.
ದಿನನಿತ್ಯ ಎರಡರಿಂದ ಮೂರು ಕಿಲೋಮೀಟರ್ ದೂರ ನಡೆಯುವುದರಿಂದ ಕ್ಯಾಲೋರಿಗಳನ್ನು ಸುಲಭವಾಗಿ ಬರ್ನ್ ಮಾಡಬಹುದು ಹಾಗೂ ಇದರಿಂದ ತೂಕ ಕಳೆದುಕೊಳ್ಳುವುದು ಸುಲಭವಾಗಬಹುದು. ಎಲ್ಲಾ ವಯಸ್ಸಿನವರು ನಡಿಗೆ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಅದೇ ರೀತಿ ಯೋಗಾಸನಗಳು ದೇಹದ ಉಸಿರಾಟದ ಏರಿಳಿತವನ್ನು ನಿಯಂತ್ರಿಸುತ್ತದೆ ಹಾಗೂ ಏಕಾಗ್ರತೆಯನ್ನು ಹೆಚ್ಚಿಸಿ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಉದ್ಯೋಗ ಅಥವಾ ಇತರೆ ಕಾರಣದಿಂದ ಒತ್ತಡದ ಸಮಸ್ಯೆಯಿಂದ ಬಳಲುವವರು ನಿತ್ಯ ಯೋಗಾಸನ ಮಾಡುವುದರಿಂದ ನೆಮ್ಮದಿ ಕಂಡುಕೊಳ್ಳಬಹುದು. ಯೋಗ ಮತ್ತು ವಾಕಿಂಗ್ ಎರಡು ಕೂಡ ತೂಕ ಹೇಳಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಾವುದು ಉತ್ತಮ ಎಂಬುದು ವೈಯುಕ್ತಿಕ ಆದ್ಯತೆಯನ್ನು ಅವಲಂಬಿಸಿರುತ್ತದೆ.

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...