Kannada Duniya

ರಿವರ್ಸ್ ಡಯೆಟಿಂಗ್ – ತೂಕವನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ….!

ಕೆಲವರು ತೂಕ ಇಳಿಸಲು ಡಯೆಟ್ ಮಾಡುವಾಗ ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುತ್ತಾರೆ. ಇದು ಕೊಬ್ಬನ್ನು ನಿಯಂತ್ರಿಸುತ್ತದೆ. ಆದರೆ ತೂಕ ಇಳಿದ ಬಳಿಕ ಮತ್ತೆ ಮೊದಲಿನಂತೆ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ದೇಹದಲ್ಲಿ ಇದ್ದಕ್ಕಿದ್ದಂತೆ ಕೊಬ್ಬಿನ ಪ್ರಮಾಣ ಹೆಚ್ಚಾಗುತ್ತದೆ. ತೂಕ ಹೆಚ್ಚಾಗುತ್ತದೆ.

ಹಾಗಾಗಿ ತೂಕವನ್ನು ನಿಯಂತ್ರಿಸುವುದರ ಜೊತೆಗೆ ಹೆಚ್ಚು ಆಹಾರವನ್ನು ಸೇವಿಸಲು ಬಯಸುವವರು, ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಬಯಸುವವರು, ತುಂಬಾ ಕಡಿಮೆ ಕ್ಯಾಲೋರಿಗಳನ್ನು ಸೇವಿಸಿ ದುರ್ಬಲರಾಗುತ್ತಿದ್ದೀರಿ ಎಂಬ ಭಾವನೆ ಕಾಡುತ್ತಿದ್ದರೆ ಅಂತವರು ಈ ರಿವರ್ಸ್ ಡಯೆಟ್ ಕ್ರಮವನ್ನು ಫಾಲೋ ಮಾಡಿ.

ಕಡಿಮೆ ಕ್ಯಾಲೋರಿಯನ್ನು ಸೇವಿಸುವುದರಿಂದ ಈ ರೋಗಗಳು ಕಾಡುತ್ತದೆ…!

ಕ್ರಮೇಣ ನಿಮ್ಮ ಆಹಾರದಲ್ಲಿ ಕ್ಯಾಲೋರಿಯನ್ನು ಹೆಚ್ಚಿಸಿ. ಇದನ್ನು 2 ವಾರಗಳ ಕಾಲ ಮಾಡಿ. ಮತ್ತು ದೇಹದಲ್ಲಾಗುವ ಬದಲಾವಣೆಯನ್ನು ಗಮನಿಸಿ. 2 ವಾರಗಳ ನಂತರವೂ ನಿಮ್ಮ ದೇಹದ ತೂಕ ಒಂದೇ ರೀತಿ ಇದ್ದರೆ 100-150 ಕ್ಯಾಲೋರಿ ಆಹಾರವನ್ನು ಸೇರಿಸಿ. ಇದನ್ನು 3 ವಾರಗಳ ಕಾಲ ಮಾಡಿ ಇದರಿಂದ ದೇಹದ ತೂಕ ಹೆಚ್ಚಾಗುತ್ತಿದೆಯೇ ಎಂಬುದನ್ನು ಗಮನಿಸಿ. ಆಗ ತೂಕ ಹೆಚ್ಚುತ್ತಿದ್ದರೆ ಮತ್ತೆ ಕ್ಯಾಲೋರಿಯನ್ನು ಇಳಿಸಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...