Kannada Duniya

ರಾತ್ರಿ ಎಳನೀರು ಕುಡಿದರೆ ಏನಾಗುತ್ತದೆ ಗೊತ್ತಾ….?

ಎಳನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಕುಡಿಯುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆಯಾಸ, ಸುಸ್ತು ದೂರವಾಗುತ್ತದೆ. ಅಲ್ಲದೇ ಇದರಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಆದರೆ ಎಳನೀರನ್ನು ರಾತ್ರಿಯ ವೇಳೆ ಸೇವಿಸಿದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಎಳನೀರಿನಲ್ಲಿ ಎಲೆಕ್ಟ್ರೋಲೈಟ್ ಗಳಿದ್ದು, ಇದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ನೀರಿನ ಕೊರತೆ ಕಾಡುವುದಿಲ್ಲ. ಹಾಗಾಗಿ ರಾತ್ರಿ ಮಲಗುವ ಮುನ್ನ ಇದನ್ನು ಕುಡಿಯಿರಿ.

ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳಿವೆ. ಇದು ಜಲಸಂಚಯನಕ್ಕೆ ಸಹಾಯ ಮಾಡುತ್ತದೆ. ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಡುವುದಿಲ್ಲ.

ಫ್ರಿಜ್ ನಲ್ಲಿಟ್ಟ ಕೊತ್ತಂಬರಿ ಸೊಪ್ಪು ಒಣಗಬಾರದಂತಿದ್ದರೆ ಈ ವಿಧಾನ ಅನುಸರಿಸಿ

ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ. ಹಾಗಾಗಿ ಹೈಬಿಪಿ ಸಮಸ್ಯೆ ಇರುವವರು ರಾತ್ರಿ ಎಳನೀರನ್ನು ಕುಡಿಯಿರಿ.

ರಾತ್ರಿ ಎಳನೀರು ಕುಡಿಯುವುದರಿಂದ ಕಿಡ್ನಿ ಸ್ವಚ್ಛವಾಗುತ್ತದೆ. ಇದರಿಂದ ಮೂತ್ರದ ಸೋಂಕಿನ ಸಮಸ್ಯೆ ಕಾಡುವುದಿಲ್ಲ. ಹಾಗೇ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...