Kannada Duniya

ಫ್ರಿಜ್ ನಲ್ಲಿಟ್ಟ ಕೊತ್ತಂಬರಿ ಸೊಪ್ಪು ಒಣಗಬಾರದಂತಿದ್ದರೆ ಈ ವಿಧಾನ ಅನುಸರಿಸಿ

ಕೊತ್ತಂಬರಿ ಸೊಪ್ಪನ್ನು ಬಳಸಿ ಹಲವು ಅಡುಗೆಯನ್ನು ತಯಾರಿಸುತ್ತಾರೆ. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಆರೋಗ್ಯಕ್ಕೂ ಉತ್ತಮಕಾರಿ. ಆದರೆ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯಿಂದ ತಂದು ಒಣಗಬಾರದೆಂದು ಫ್ರಿಜ್ ನಲ್ಲಿಡುತ್ತೇವೆ. ಆದರೆ ಕೆಲವೊಮ್ಮೆ ಇದು ಫ್ರಿಜ್ ನಲ್ಲಿಟ್ಟಾಗಲೂ ಕೂಡ ಒಣಗುತ್ತದೆ. ಅದಕ್ಕಾಗಿ ಈ ವಿಧಾನ ಅನುಸರಿಸಿ.

-ಕೊತ್ತಂಬರಿ ಸೊಪ್ಪನ್ನು ಬೇರುಗಳನ್ನು ಕತ್ತರಿಸಿ 2-3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು ಅದನ್ನು ಒಣಗುವವರೆಗೂ ಫ್ಯಾನ್ ಅಡಿಯಲ್ಲಿ ಇಟ್ಟು ಬಳಿಕ ಅದನ್ನು ಗಾಳಿಯಾಡದ ಡಬ್ಬದಲ್ಲಿ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಫ್ರಿಜ್ ನಲ್ಲಿಡಿ. ಇದರಿಂದ ಕೊತ್ತಂಬರಿ ಸೊಪ್ಪನ್ನು 2 ವಾರಗಳ ಕಾಲ ಬಳಸಬಹುದು.

ಕೊತ್ತಂಬರಿ ಪುಡಿ ಬಳಸಿ ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿ

-ಕೊತ್ತಂಬರಿ ಸೊಪ್ಪನ್ನು ತಾಜಾವಾಗಿಡಲು ಅದರ ಬೇರುಗಳನ್ನು ಒಂದು ನೀರು ತುಂಬಿರುವ ಪಾತ್ರೆಯಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ನೀರನ್ನು ಆಗಾಗ ಬದಲಾಯಿಸುತ್ತೀರಿ. ಇದರಿಂದ ಕೊತ್ತಂಬರಿ ಸೊಪ್ಪು ತಾಜಾವಾಗಿರುತ್ತದೆ.

-ಕೊತ್ತಂಬರಿ ಸೊಪ್ಪು ಒಂದು ತಿಂಗಳವರೆಗೆ ತಾಜಾವಾಗಿಡಲು ಅದರ ಕಾಂಡವನ್ನು ತೆಗೆದು ಸ್ವಚ್ಛ ಮಾಡಿ ಸೊಪ್ಪುಗಳನ್ನು ಮಾತ್ರ ಬಟ್ಟೆಯಲ್ಲಿ ಕಟ್ಟಿ ಗಾಳಿಯಾಡದ ಪಾತ್ರೆಯಲ್ಲಿಟ್ಟು ಫ್ರಿಜ್ ನಲ್ಲಿಡಿ.

 

Tips to store coriander leaves without spoiling


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...