Kannada Duniya

ಮುಖದಲ್ಲಿರುವ ಸೂಕ್ಷ್ಮ ಗೆರೆಗಳು, ಕಲೆಗಳು ನಿವಾರಣೆಯಾಗಲು ಈ ಫೇಸ್ ಮಾಸ್ಕ್ ಹಚ್ಚಿ

ವಯಸ್ಸಾದಂತೆ ಮುಖದಲ್ಲಿ ಸುಕ್ಕುಗಳು, ಗೆರೆಗಳು ಮೂಡಲು ಶುರುವಾಗುತ್ತದೆ. ಇದು ನಿಮ್ಮ ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿ ನಿಮ್ಮ ಅಂದವನ್ನು ಹೆಚ್ಚಿಸಲು ಈ ಫೇಸ್ ಮಾಸ್ಕ್ ಹಚ್ಚಿ.

ನುಗ್ಗೆ ಎಲೆಗಳಲ್ಲಿ ಹಲವು ಪೋಷಕಾಂಶಗಳಿವೆ. ಇದು ಮುಖದಲ್ಲಿರುವ ತೆರೆದ ರಂಧ್ರಗಳನ್ನು ಸ್ವಚ್ಛಮಾಡುತ್ತದೆ. ಇದು ಚರ್ಮದಲ್ಲಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಸುಕ್ಕು ಮತ್ತು ಕಲೆಗಳನ್ನು ನಿವಾರಿಸುತ್ತದೆ. ಇದು ಮುಖದಲ್ಲಿರುವ ಟ್ಯಾನಿಂಗ್ ಅನ್ನು ನಿವಾರಿಸುತ್ತದೆ.

ಅದಕ್ಕಾಗಿ ನುಗ್ಗೆ ಸೊಪ್ಪನ್ನು ತೆಗೆದುಕೊಂಡು ಅದಕ್ಕೆ 1 ಚಮಚ ಜೇನುತುಪ್ಪ ಮತ್ತು 1 ಚಮಚ ನಿಂಬೆರಸವನ್ನು ಸೇರಿಸಿ. ಹಾಗೇ ನಿಮ್ಮ ತ್ವಚೆ ಶುಷ್ಕವಾಗಿದ್ದರೆ ಹಾಲು ಸೇರಿಸಿ, ಎಣ್ಣೆಯುಕ್ತ ತ್ವಚೆಯಾದರೆ ರೋಸ್ ವಾಟರ್ ಸೇರಿಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...