Kannada Duniya

ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ಹೆಚ್ಚಿಸಲು ಇದನ್ನು ಸೇವಿಸಿ

ಮಹಿಳೆಯರ ದೇಹದಲ್ಲಿ ಹಾರ್ಮೋನ್ ನಲ್ಲಿ ವ್ಯತ್ಯಾಸವಾದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಅದರಲ್ಲಿ ಮಹಿಳೆಯರಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ನ ಕೊರತೆಯಾದರೆ ಸಂತಾನೋತ್ಪತ್ತಿಯಲ್ಲಿ ಸಮಸ್ಯೆಯಾಗುತ್ತದೆ. ಹಾಗಾಗಿ ಈ ಹಾರ್ಮೋನ್ ಅನ್ನು ಹೆಚ್ಚಿಸಲು ಈ ಸಲಹೆ ಪಾಲಿಸಿ.

ಕಡಲೆಬೇಳೆ ಮತ್ತು ಬಾಳೆಹಣ್ಣು : ಇದರಲ್ಲಿ ವಿಟಮಿನ್ ಬಿ6 ಅಧಿಕವಾಗಿದೆ. ಇದು ಪ್ರೊಜೆಸ್ಟರಾನ್ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕ್ಯಾಪ್ಸಿಕಂ ಮತ್ತು ಸಿಟ್ರಸ್ ಹಣ್ಣುಗಳು: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ಪ್ರೊಜೆಸ್ಟರಾನ್ ಹಾರ್ಮೋನ್ ಮಟ್ಟ ಹೆಚ್ಚಾಗುತ್ತದೆಯಂತೆ.

ಪಾಲಕ್ ಮತ್ತು ಬ್ರೊಕೊಲಿ : ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಸಂತಾನೋತ್ಪತ್ತಿಗೆ ಸಹಾಯಕವಾಗುವ ಹಾರ್ಮೋನ್ ಗಳನ್ನು ಸಮತೋಲನದಲ್ಲಿಡುತ್ತದೆ.

ಅಣಬೆ, ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು : ಇದರಲ್ಲಿ ವಿಟಮಿನ್ ಡಿ ಇದ್ದು, ಇದು ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...