Kannada Duniya

ಮಧುಮೇಹಕ್ಕೆ ತೊಗರಿ ಬೇಳೆಯಲ್ಲಿದೆ ಮದ್ದು…!

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಒಮ್ಮೆ ದೇಹಕ್ಕೆ ಅಡರಿಕೊಂಡರೆ ಅದು ಮತ್ತೆಂದೂ ನಿಮ್ಮನ್ನು ಬಿಟ್ಟು ಹೋಗದು. ಸರಿಯಾದ ಆಹಾರ ಕ್ರಮದ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.

-ಮಧುಮೇಹದ ನಿಯಂತ್ರಣಕ್ಕೆ ತೊಗರಿ ಬೇಳೆಯ ಕೊಡುಗೆ ಬಲು ದೊಡ್ಡದು. ತೊಗರಿಯನ್ನು ಪ್ರೊಟೀನ್ ನ ಶಕ್ತಿ ಮನೆ ಎನ್ನಲಾಗುತ್ತದೆ. ಅದರಲ್ಲಿ ಜೀವಸತ್ವಗಳು ಹಾಗೂ ಕಬ್ಬಿಣದ ಅಂಶ ಧಾರಾಳವಾಗಿದೆ. ಮಾತ್ರವಲ್ಲ ಇದರಲ್ಲಿ ನಾರಿನ ಪ್ರಮಾಣವೂ ಸಾಕಷ್ಟಿದೆ.

-ಇದು ಕಡಿಮೆ ಕಾರ್ಬೋಹೈಡ್ರೇಟ್ ಗಳನ್ನು ಒಳಗೊಂಡಿದ್ದು ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದರಲ್ಲೂ ದ್ವಿದಳ ಧಾನ್ಯಗಳು ಮಧುಮೇಹ ರೋಗಿಗಳಿಗೆ ಸದಾ ನೆರವಾಗುತ್ತವೆ.

ಹಲ್ಲಿನ ಮೇಲಿನ ಬಿಳಿ ಚುಕ್ಕೆಗಳನ್ನು ಹೋಗಲಾಡಿಸಲು ಹೀಗೆ ಮಾಡಿ….!

-ತೊಗರಿ ಬೇಳೆ ಬೇಯಿಸಿದ ನೀರನ್ನು ಕುಡಿಯುವುದರಿಂದ, ಕಪ್ಪು ಕಡಲೆ, ರಾಜ್ಮಾ, ಹೆಸರು ಕಾಳು, ಕಾಬೂಲ್ ಕಡ್ಲೆ ಸೇವನೆ ಮಾಡುವುದರಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮನೆಯಲ್ಲಿ ಇದನ್ನು ಮಕ್ಕಳಿಗೂ ಸೇವಿಸಲು ಕೊಡುವುದರಿಂದ ಅವರ ರೋಗ ನಿರೋಧಕ ಶಕ್ತಿಯೂ ವೃದ್ಧಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...